ಬ್ರಹ್ಮಾವರ : ಶ್ರೀರಾಮ ನವಮಿ : ಶ್ರೀರಾಮ ಮಂದಿರ ಕುಂಜಾಲಿನಲ್ಲಿ ವಿಶೇಷ ಪೂಜೆ
Published
0
ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಶ್ರೀ ರಾಮ ನವಮಿ ಉತ್ಸವದ ಅಂಗವಾಗಿ ಶ್ರೀ ರಾಮ ಮಂದಿರ ಕುಂಜಾಲಿನಲ್ಲಿ ವಿಶೇಷ ಪೂಜೆ ಭಾನುವಾರ ಜರುಗಿತು. ಎಪ್ರಿಲ್ 2 ರಿಂದ ಪ್ರತೀ ದಿನ ಭಜನೆ ಹಾಗೂ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮ ದೊಂದಿಗೆ ವಸಂತ ನವರಾತ್ರಿ ಪರ್ವ ವಿಶೇಷವಾಗಿ ರಾಮೋತ್ಸವ ಹಾಗೂ ಭಜನಾ ಸಪ್ತೋತ್ಸವ ಮತ್ತು ಮಧ್ಯಾಹ್ನ ಅನ್ನ ಸಂತರ್ಪಣೆ ಜರುಗಿತು.
ಪರಿಸರದ 11 ಭಜನಾ ಮಂಡಳಿಗಳಿಂದ ಸಪ್ತ ಜಾವ ಭಜನೆ, ಸಂಜೆ ಪುರ ಭಜನೆ ಜರುಗಿತು.
ಭಜನಾ ಮಂದಿರದ ಆಡಳಿತ ಮಂಡಳಿಯ ಅಧ್ಯಕ್ಷ ನಾಗರಾಜ ಶೆಟ್ಟಿ ಮಕ್ಕಿತೋಟ ಮನೆ, ಕಾರ್ಯದರ್ಶಿ ಸೀತಾರಾಮ ಆಚಾರ್ಯ, ಖಜಾಂಚಿ ಪದ್ಮನಾಭ ರಾವ್ ಇನ್ನಿತರರು ನೇತೃತ್ವ ವಹಿಸಿದ್ದರು.
60 ವರ್ಷದಿಂದ ಈ ಭಾಗದ ಜನರ ನೆರವಿನಿಂದ ರಾಮ ದೇವರ ಭಾವ ಚಿತ್ರ ಇರಿಸಿ ಭಜನೆ ಮಾಡುತ್ತಿದ್ದು ಇದೀಗ ಶ್ರೀ ರಾಮಚಂದ್ರ , ಲಕ್ಷ್ಷ್ಮಣ, ಸೀತಾ ಮತ್ತು ಆಂಜನೇಯ ಸಹಿತ ಮೂರ್ತಿ ಇರಿಸಿ ಪೂಜೆ ನಡೆಸುವ ಹಂತಕ್ಕೆ ಬಂದು ಸ್ವಂತ ಮಂದಿರವನ್ನು ಹೊಂದಿದೆ.ನಾಗರಾಜ ಶೆಟ್ಟಿ ಮಕ್ಕಿ ತೋಟ ಮನೆ ಶ್ರೀರಾಮ ಭಜನಾ ಮಂದಿರದ ಆಡಳಿತ ಮಂಡಳಿಯ ಅಧ್ಯಕ್ಷ