ಉಡುಪಿ : ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ ಕಮಿಷನ್ ಪಡೆಯುತ್ತಾರೆ ಎಂದು ಆರೋಪ ಮಾಡಿದ್ದ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಚಿವ ಕೆ ಎಸ್ ಈಶ್ವರಪ್ಪ ವಿರುದ್ಧ ಶೇ.40ರಷ್ಟು ಗುತ್ತಿಗೆಗಳಲ್ಲಿ ಕಮೀಷನ್ ಕೇಳುತ್ತಿದ್ದಾರೆ. ಈ ಬಗ್ಗೆ ಸಚಿವ ಈಶ್ವರಪ್ಪ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಿಜೆಪಿ ಕೇಂದ್ರದ ವರಿಷ್ಠರಿಗೂ ದೂರನ್ನು ಗುತ್ತಿಗೆದಾರ ಸಂತೋಷ್ ಮಾಡಿದ್ದರು.
ಆದರೆ, ಇದೀಗ ಸಂತೋಷ್ ಪಾಟೀಲ್ ಡೆತ್ ನೋಟ್ ಬರೆದಿಟ್ಟು ಉಡುಪಿಯ ಶಾಂಭವಿ ಲಾಡ್ಜ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Advertisement. Scroll to continue reading.
ನನ್ನ ಸಾವಿಗೆ ಸಚಿವ ಕೆ.ಎಸ್. ಈಶ್ವರಪ್ಪ ಕಾರಣ ಎಂದು ನಾಪತ್ತೆಗೂ ಮುನ್ನಾ ಮಾಧ್ಯಮ ಪ್ರತಿನಿಧಿಗಳಿಗೆ ಡೆತ್ ನೋಟ್ ವಾಟ್ಸಾಪ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಆ ಬಳಿಕ ಪೊಲೀಸರು ನಾಪತ್ತೆಯಾಗಿದ್ದ ಸಂತೋಷ್ ಪತ್ತೆಗಾಗಿ ಪೊಲೀಸರು ತನಿಖೆ ಕೈಗೊಂಡಿದ್ದರು. ಈ ಬೆನ್ನಲ್ಲೇ, ಉಡುಪಿಯ ಖಾಸಗಿ ಹೋಟೆಲ್ ನಲ್ಲಿ ಗುತ್ತಿಗೆದಾರ ಸಂತೋಷ್ ಕೆ ಪಾಟೀಲ್ ಅವರು ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿರೋದಾಗಿ ತಿಳಿದು ಬಂದಿದೆ.
ಸಚಿವ ಕೆ.ಎಸ್ ಈಶ್ವರಪ್ಪ ವಿರುದ್ಧ ಗುತ್ತಿಗೆ ಹಣ ಬಿಡುಗಡೆಗಾಗಿ ಶೇ.40ರಷ್ಟು ಕಮೀಷನ್ ಆರೋಪವನ್ನು ಸಂತೋಷ್ ಮಾಡಿದ್ದರು. ಅಲ್ಲದೇ ಬಿಜೆಪಿ ವರಿಷ್ಠರಿಗೂ ಈ ಸಂಬಂಧ ಭೇಟಿಯಾಗಿ ದೂರನ್ನೂ ನೀಡಿದ್ದರು.
ಈ ವಿಷಯವಾಗಿಯೇ ಕಾಂಗ್ರೆಸ್ ಕಳೆದ ವಿಧಾನಸಭೆಯ ವೇಳೆಯಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಿ, ಸಂಪುಟದಿಂದ ಕಮೀಷನ್ ಆರೋಪ ಹೊತ್ತಿರುವಂತ ಈಶ್ವರಪ್ಪ ಅವರನ್ನು ಕೈಬಿಡುವಂತೆಯೂ ಒತ್ತಾಯ ಮಾಡಿತ್ತು.
Advertisement. Scroll to continue reading.