ಮಂಗಳೂರು ವಿವಿಗೆ 3ನೇ ರ್ಯಾಂಕ್ ಬಂದಿರುವ ಕಲ್ಯಾಣಪುರ ಮಿಲಾಗ್ರೀಸ್ ಕಾಲೇಜಿನ ಎಂಕಾಂ ವಿದ್ಯಾರ್ಥಿನಿ ಸಚಿವ ಕೋಟ ಪುತ್ರಿಗೆ ಸನ್ಮಾನ
Published
1
ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಕಲ್ಯಾಣಪುರ ಮಿಲಾಗ್ರೀಸ್ ಕಾಲೇಜಿನ ಎಂ ಕಾಂ ವಿದ್ಯಾರ್ಥಿನಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಪುತ್ರಿ ಸ್ವಾತಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ 3ನೇ ರ್ಯಾಂಕ್ ಬಂದ ಹಿನ್ನೆಲೆಯಲ್ಲಿ ಮಿಲಾಗ್ರೀಸ್ ಕಾಲೇಜಿನ ವತಿಯಿಂದ ಕೋಟದ ಅವರ ಮನೆಯಲ್ಲಿ ಅವರ ತಾಯಿ ಶಾಂತಾ ಶ್ರೀನಿವಾಸ ಪೂಜಾರಿಯವರರೊಂದಿಗೆ ಅಭಿನಂದಿಸಲಾಯಿತು.
ಕಾಲೇಜಿನ ಪ್ರಿನ್ಸಿಪಾಲ್ ಡಾ.ವಿಸ್ಸೆಂಟ್ ಆಳ್ವ ಈ ಸಂದರ್ಭ ಮಾತನಾಡಿ, ಒಬ್ಬರು ಸಚಿವರ ಮಗಳು ಎನ್ನುವ ಯಾವೂದೆ ಅಹಂ ಇಲ್ಲದ ನಮ್ಮ ಕಾಲೇಜಿನ ವಿದ್ಯಾರ್ಥಿನಿ ಶಿಸ್ತು ಮತ್ತು ಸರಳತೆಯಲ್ಲಿ ತಂದೆಯಂತೆ ಮಾದರಿಯಾಗಿದ್ದು ನಮ್ಮ ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾಳೆ ಎಂದರು.
Advertisement. Scroll to continue reading.
ಅಭಿನಂದನೆ ಪಡೆದ ಸ್ವಾತಿ ಕಾಲೇಜಿನ ಶಿಕ್ಷಕ ವೃಂದ ಮತ್ತು ಆಡಳಿತ ಮಂಡಳಿಗೆ ಕೃತಜ್ಞತೆ ಸಲ್ಲಿಸಿದಳು. ಕಾಲೇಜಿನ ಅಂತರಿಕ ಗುಣಮಟ್ಟ ಕೋಶದ ಡಾ ಜಯರಾಮ ಶೆಟ್ಟಿಗಾರ್ , ಪ್ರೋಫೆಸರ್ ಸೂಫಿಯಾ ಡಯಾಸ್ , ರೇಷ್ಮಾ , ಸಾರ್ವಜನಿಕ ಸಂಪರ್ಕಾಧಿಕಾರಿ ರವಿನಂದನ್ ಭಟ್ ಉಪಸ್ಥಿತರಿದ್ದರು.