ಬ್ರಹ್ಮಾವರ : ಡಾ ಬಿ.ಆರ್. ಅಂಬೇಡ್ಕರ್ 131 ನೇ ಜನ್ಮ ದಿನಾಚರಣೆ
Published
1
ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಡಾ ಬಿ. ಆರ್ ಅಂಬೇಡ್ಕರ್ 131 ನೇ ಜನ್ಮ ದಿನಾಚರಣೆ ಬ್ರಹ್ಮಾವರ ತಾಲೂಕು ಆಡಳಿತದಿಂದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಜರುಗಿತು. ಕ್ಷೇತ್ರ ಸಮನ್ವಯಾಧಿಕಾರಿ ಅರ್ಚನ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಅಂಬೇಡ್ಕರ್ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಬ್ರಹ್ಮಾವರ ತಾಲೂಕು ತಹಶೀಲ್ದಾರ ರಾಜಶೇಖರ ಮೂರ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಭಾಷಣಕಾರರಾಗಿ ತೆಂಕನಿಡಿಯೂರು ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ಡಾ ಜಯಪ್ರಕಾಶ್ ಶೆಟ್ಟಿ ಮಾತನಾಡಿ, ಶಾಲೆಯ ರಜೆಯ ಸಮಯದಲ್ಲಿ ಅಂಬೇಡ್ಕರ್ ಜನ್ಮ ದಿನಾಚರಣೆ ಬಂದ ಕಾರಣ ವಿದ್ಯಾರ್ಥಿಗಳಿಗೆ ಈ ದೇಶದಲ್ಲಿ ಈ ತನಕ ಅವರ ತತ್ವ ಸಿದ್ಧಾಂತ ನಿಲುವನ್ನು ನೀಡಲು ಅಸಾದ್ಯವಾಗಿದೆ. ಅದೇ ಕಾರಣದಿಂದ ಅವರ ಹೆಸರಿನಲ್ಲಿ ಎಲ್ಲವನ್ನೂ ಪಡೆದ ಜನರೇ ಇಂದು ಅವರನ್ನು ಕೇವಲ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ನೆನಪಿಸದಂತಾಗಿದೆ ಎಂದರು.
ಬ್ರಹ್ಮಾವರ ಪೋಲೀಸ್ ಠಾಣಾಧಿಕಾರಿ ಗುರುನಾಥ್ ಬಿ. ಹಾದಿಮನೆ ಮಾತನಾಡಿ, ಇಡೀ ವಿಶ್ವವೇ ಮೆಚ್ಚುವಂತ ಸಂವಿಧಾನವನ್ನು ನಿರ್ಮಿಸಿದ ಬಾಬಾ ಸಾಹೇಬ್ ರನ್ನು ಎಲ್ಲರೂ ನೆನಪಿಸಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಟಿ ನಾಯ್ಕ್ , ಪ್ರಿನ್ಸಿಪಾಲ್ ರವೀಂದ್ರ ಉಪಾಧ್ಯಾಯ, ತಾಲೂಕು ಪಂಚಾಯತಿ ಕಾರ್ಯನಿರ್ವಣಾಧಿಕಾರಿ ಎಚ್ .ವಿ. ಇಬ್ರಾಹಿಂಪುರ, ಮೈರ್ಮಾಡಿ ಸುಧಾಕರ ಶೆಟ್ಟಿ, ನಿತ್ಯಾನಂದ ಶೆಟ್ಟಿ ಇನ್ನಿತರರು ಉಪಸ್ಥಿತರಿದ್ದರು.