ಬ್ರಹ್ಮಾವರ : ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಉಡುಪಿ ಜಿಲ್ಲೆ ಇವರ ವತಿಯಿಂದ ಬಾಬಾ ಸಾಹೇಬ್ ಅಂಬೇಡ್ಕರ್ ಇವರ 131 ನೇ ಜನ್ಮ ದಿನಾಚರಣೆ ಅಂಗವಾಗಿ ಶೋಷಿತರ ಸಮುದಾಯಗಳ ಭೂಮಿ ಹಕ್ಕು ಜಾಗೃತಿ ಜಾಥಾ ನಮ್ಮಭೂಮಿ ನಮ್ಮಹಕ್ಕು ಜೈ ಭೀಮ್ ವಾಹನ ರ್ಯಾಲಿ ಗುರುವಾರ ಬೆಳಿಗ್ಗೆ ಜಿಲ್ಲೆಯ ಗಡಿ ಭಾಗವಾದ ಶಿರೂರು ಟೋಲ್ ಗೇಟ್‍ನಿಂದ ಆರಂಭಗೊಂಡು ಸಂಜೆ ಬ್ರಹ್ಮಾವರ ಬಸ್ ನಿಲ್ದಾಣದ ಬಳಿ ಸಮಾರೋಪ ಸಮಾರಂಭ ಜರುಗಿತು.
ಅಲಂಕೃತ ವಾಹನದಲ್ಲಿ ಬಾಬಾ ಸಾಹೇಬ್ ಅಂಬೆಡ್ಕರ್ ಅವರ ಭಾವ ಚಿತ್ರಕ್ಕೆ ಹಲವಾರು ಗಣ್ಯರು ಪುಷ್ಪ ನಮನ ಸಲ್ಲಿಸಿದರು.
Advertisement. Scroll to continue reading.
ಈ ಸಂದರ್ಬ ರಾಜ್ಯ ದಲಿತ ಸಂಘರ್ಷ ಸಮಿತಿಯ ಸದಸ್ಯ ಜಯನ್ ಮಲ್ಪೆ ಮಾತನಾಡಿ, ಹಿಂದುಳಿದವರ ಕುರಿತು ರಾಜ್ಯದ ಮುಖ್ಯ ಮಂತ್ರಿಯಾದ ದಿವಂಗತ ದೇವರಾಜ ಅರಸು ಅವರ ನಂತರ ಯಾವ ಸರಕಾರ ಕೂಡಾ ಬೆಂಬಲ ನೀಡಿಲ್ಲ. ತುಂಡು ಭೂಮಿಗಾಗಿ ಇಂದಿಗೂ ಕೂಡಾ ದಲಿತರು ಹೋರಾಟ ಮಾಡಬೇಕಾಗಿದೆ ಎಂದರು.
ಬ್ರಹ್ಮಾವರದ ಯುವ ಮುಖಂಡ ಬಿರ್ತಿ ರಾಜೇಶ್ ಶೆಟ್ಟಿ ಮಾತನಾಡಿ, ಅಂಬೆಡ್ಕರ್ ಕೇವಲ ದಲಿತರ ನಾಯಕರಲ್ಲಿ ದೇಶದ ಮಹಾ ನಾಯಕರು ಎಂದರು.
ಬ್ರಹ್ಮಾವರ ಪೋಲೀಸ್ ಠಾಣಾಧಿಕಾರಿ ಗುರುನಾಥ್ ಬಿ ಹಾದಿಮನೆ, ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಬಿ. ಭುಜಂಗ ಶೆಟ್ಟಿ , ಶಿಕ್ಷಣ ಸಂಯೋಜಕ , ಪ್ರಕಾಶ್ ಬಿ.ಬಿ. ಮುಂಖಂಡರುಗಳಾದ ಮಂಜುನಾಥ್ ಗಿಳಿಯಾರು, ಎಸ್. ನಾರಾಯಣ, ಸುರೇಶ್ ಬಾರಕೂರು, ವಿಶ್ವನಾಥ್ ಬೆಳ್ಳಂಪಳ್ಳಿ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.
0 ಬ್ರಹ್ಮಾವರ : ರುಡ್ ಸೆಟ್ ಬ್ರಹ್ಮಾವರ ಮತ್ತು ಸ್ಮಾರ್ಟ್ ಕ್ರೀಯೇಶನ್ಸ್ ಎಜ್ಯುಕೇಶನ್ ಟ್ರಸ್ಟ್ ಹೈಕಾಡಿ ಸಂಸ್ಥೆಯ ಸಹಭಾಗಿತ್ವದಲ್ಲಿ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹೈಕಾಡಿಯಲ್ಲಿ ಮೇಣದಬತ್ತಿ ತಯಾರಿಕಾ ತರಬೇತಿ ಉದ್ಘಾಟನೆಗೊಂಡಿತು. ಆವರ್ಸೆ...