ಬಾರಕೂರು : ತುಳುನಾಡಿನ ರಾಜಧಾನಿ ಬಾರಕೂರಿನ ಸಿಂಹಾಸನ ಗುಡ್ಡೆಯಲ್ಲಿರುವ ಅರಮನೆ ಹನುಮಂತ ದೇವಸ್ಥಾನದಲ್ಲಿ ಹನುಮ ಜಯಂತಿಯಂದು ಪೂಜಿಸಲ್ಪಟ್ಟ ಅರಮನೆ ಹನುಮ. ಗತಕಾಲದಲ್ಲಿ ತುಳುನಾಡಿನ ರಾಜಧಾನಿ ಬಾರಕೂರಿನ ರಾಜ್ಯಭಾರ ಮಾಡಿದ ವಿಕ್ರಮಾದಿತ್ಯರಾಜ ರಾಜ್ಯ ಸಂಚಾರ ಮಾಡುವಾಗ ಮೊದಲು ಈ ಅರಮನೆ ಹನುಮಂತದೇವರಿಗೆ ಪೂಜೆ ಸಲ್ಲಿಸುತ್ತಿರುವ ಐತಿಹ್ಯ ಇದೆ. ಹಾಗಾಗಿ ಅರಮನೆ ಕಾವಲು ರಕ್ಷಕನೆಂದು ಈ ಹನುಮಂತದೇವರು ಎಂದು ಪ್ರಸಿದ್ಧಿ ಪಡೆದಿದೆ. ಬಾರಕೂರಿನ ಪಂಚಲೀಂಗೇಶ್ವರ, ಹಾಗೂ ಕುಲಮಹಾಸ್ರೀ ಅಮ್ಮ, ಬೆಣ್ಣೆಕುದುರು ಭಜನಾ ಮಂಡಳಿಯ ಸದಸ್ಯರಿಂದ ಹನುಮದೇವರ ಭಜನಾ ಕಾರ್ಯಕ್ರಮ ನಡೆಯಿತು.
ಅರ್ಚಕರಾದ ಗುರುಪ್ರಸಾದ್ ಅವರ ನೇತೃತ್ವದಲ್ಲಿ, ರಂಗ ಪೂಜೆ ನೇರವೇರಿತು. ನಂತರ ಪ್ರಸಾದ ವಿತರಣೆ ಮಾಡಲಾಯಿತು.