ಕರಾವಳಿ

ಬಾರಕೂರು : ಕಚ್ಚೂರು ಶ್ರೀ ಮಾಲ್ತೀದೇವಿ ದೇವಸ್ಥಾನ, ಶ್ರೀ ಬಬ್ಬುಸ್ವಾಮಿ ಮೂಲಕ್ಷೇತ್ರ ಜಾತ್ರಾ ಮಹೋತ್ಸವ : ಮಾಜಿ ಡಿಸಿಎಂ ಪರಮೇಶ್ವರ್ ಭೇಟಿ

1

ವರದಿ : ಬಿ.ಎಸ್.ಆಚಾರ್ಯ

ಬಾರಕೂರು : ಕಚ್ಚೂರು ಶ್ರೀ ಮಾಲ್ತೀದೇವಿ ದೇವಸ್ಥಾನ ಶ್ರೀ ಬಬ್ಬುಸ್ವಾಮಿ ಮೂಲಕ್ಷೇತ್ರ ಬಾರಕೂರು ಏಪ್ರಿಲ್ 15 ರಿಂದ 19 ರ ತನಕ ನಾನಾ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಜರುಗಿದ ವಾರ್ಷಿಕ ಜಾತ್ರಾ ಮಹೋತ್ಸವ ಗೆಂಡೋತ್ಸವ ಹಾಗೂ ರಥೋತ್ಸವದ ಅವಧಿಯಲ್ಲಿ ಕಚ್ಚೂರು ದೇವಳಕ್ಕೆ ರಾಜ್ಯ ಮಟ್ಟದ ಹಲವು ಕಾಂಗ್ರೆಸ್ ನಾಯಕರು ಭೇಟಿ ನೀಡಿದರು.


ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ,ವಿಧಾನ ಪರಿಷತ್ ಸದದ್ಯ ಮಂಜುನಾಥ್ ಭಂಡಾರಿ, ಮಾಜಿ ಸಚಿವರುಗಳಾದ ಪ್ರಮೋದ್ ಮಧ್ವರಾಜ್, ವಿನಯ ಕುಮಾರ್ ಸೊರಕೆ , ಮಿಥುನ್ ರೈ , ರಮೇಶ್ ಕಾಂಚನ್, ದಿನಕರ ಹೇರೂರು, ಅಮೃತ್ ಶೆಣೈ ಸೇರಿದಂತೆ ಅನೇಕರು ಆಗಮಿಸಿ ದೇವರ ದರ್ಶನ ಪಡೆದರು.


ಈ ವೇಳೆ ದೇವಸ್ಥಾನದ ಆಡಳಿತ ಧರ್ಮದರ್ಶಿ ಗೋಕುಲ್ ದಾಸ್ ಬಾರಕೂರು ದೇವಸ್ಥಾನದ ವತಿಯಿಂದ ಅವರುಗಳನ್ನು ಗೌರವಿಸಲಾಯಿತು.


ಬಳಿಕ ದೇವಸ್ಥಾನದಲ್ಲಿ ಮೊಕ್ಕಾಂ ಇರುವ ಚಿತ್ರದುರ್ಗದ ಛಲವಾದಿ ಸಂಸ್ಥಾನ ಮಠದ ಶ್ರೀಬಸವನಾಗಿ ದೇವ ಸ್ವಾಮೀಜಿಯವರನ್ನು ಭೇಟಿ ಮಾಡಿದರು.

ಅಧ್ಯಕ್ಷ ಶಿವಪ್ಪ ನಂತೂರು, ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಬಾರಕೂರು, ಖಜಾಂಚಿ ಉದಯ ಅಂಚನ್ ಎರ್ಮಾಳ್, ಗುರಿಕಾರ ಕಮಲಾಕ್ಷ ಬಾರಕೂರು, ಅರ್ಚಕರಾದ ಪ್ರಭಾಕರ ಕಚ್ಚೂರು ಉಪಸ್ಥಿತರಿದ್ದರು.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com