ಬೈಂದೂರು: ಅಶೋಕ್ ಪ್ರೀಮಿಯರ್ ಲೀಗ್ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ
Published
3
ವರದಿ : ದಿನೇಶ್ ರಾಯಪ್ಪನಮಠ
ಬೈಂದೂರು : ನಾವುಂದ ಬಡಾಕೇರೆಯಲ್ಲಿ ಅಶೋಕನ ಸವಿ ನೆನಪಿಗಾಗಿ ಅಶೋಕ್ ಪ್ರೀಮಿಯರ್ ಲೀಗ್ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ನಡೆಯಿತು.
ಉದ್ಘಾಟನೆಯನ್ನು ಬೈಂದೂರಿನ ಕರ್ಣ ಎಂದೇ ಖ್ಯಾತಿ ಪಡೆದಿರುವ ಗೋವಿಂದ ಬಾಬು ಪೂಜಾರಿ ನೆರವೇರಿಸಿದರು.
Advertisement. Scroll to continue reading.
ಬಳಿಕ ಅವರು ಮಾತನಾಡಿ, ಸಮಾಜದಲ್ಲಿ ಕ್ರೀಡಾ ಪ್ರತಿಭೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಾಲಿಬಾಲ್ ನಂತಹ ಕ್ರೀಡೆಯನ್ನು ಹಮ್ಮಿಕೊಳ್ಳುವುದು ಅವಶ್ಯಕ ಎಂದರು.
ಆಟಗಾರರ ಜರ್ಸಿಯನ್ನು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಅಶೋಕ್ ಶೆಟ್ಟಿ ಜೆ.ಕೆ.ಕುಂದಾಪುರ ಬಿಡುಗಡೆಗೊಳಿಸಿದರು. ಈ ವೇಳೆ ಸತತ 25 ವರ್ಷಗಳಿಂದ ದೈಹಿಕ ಶಿಕ್ಷಣ ಶಿಕ್ಷಕರಾಗಿ ಅನೇಕ ಬಡ ವಿದ್ಯಾರ್ಥಿಗಳ ಪಾಲಿಗೆ ಆಶಾ ಕಿರಣ ವಾದ ಜೀವನ್ ಕುಮಾರ್ ಶೆಟ್ಟಿ ದೈಹಿಕ ಶಿಕ್ಷಕರು ಸರಕಾರಿ ಪದವಿ ಪೂರ್ವ ಕಾಲೇಜು ನಾವುಂದ ಇವರನ್ನ ಸನ್ಮಾನಿಸಲಾಯಿತು.
ಸಮಾರೋಪ ಸಮಾರಂಭ:
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವೇದ ಮೂರ್ತಿ ಲೋಕೇಶ್ ಅಡಿಗ ವಹಿಸಿ, ವಿಜೇತರಿಗೆ ಬಹುಮಾನವನ್ನು ವಿತರಿಸಿದರು. ತಾಲೂಕು ಲಬೆಲ್ ಪಂದ್ಯಾಟವನ್ನು ದೀಪಕ್ ಕುಮಾರ್ ಶೆಟ್ಟಿ ಮಂಡಲ ಬಿಜೆಪಿ ಅಧ್ಯಕ್ಷರು ಮತ್ತು ರಾಜ ಪೂಜಾರಿ ಮರವಂತೆ ಬಡಾಕೆರೆ ಸೇವಾ ಸಹಕಾರಿ ಸಂಘ ನಿಯಮಿತ ನಾವುಂದ ಏರಿಯಾ ಏರಿಯಾ ವಾಯ್ಸ್ ಪಂದ್ಯಾಟದ ಉದ್ಘಾಟನೆ ನಿರ್ವಹಿಸಿದರು.
ಈ ಕಾರ್ಯಕ್ರಮದಲ್ಲಿ ದೇವರಾಜ್ ಪೂಜಾರಿ,ಜಯಾನಂದ ಹೊಬಳಿಲಿದಾರ್ , ಗಣೇಶ್ ದೇವಾಡಿಗ, ಸುರೇಶ್ ಜೋಗಿ, ಏನ್ ರಮೇಶ್ ದೇವಾಡಿಗ, ಶ್ರಿದರ್ ದೇವಾಡಿಗ, ವಾಸು ದೇವಾಡಿಗ ಮಹೇಂದ್ರ ಪೂಜಾರಿ, ಜಗದೀಶ್ ಪೂಜಾರಿ ಹಕ್ಕಾಡಿ, ವಾಸುಪೂಜಾರಿ, ಮಹೇಶ್ ಆಚಾರ್ಯ ಮಹೇಶ್ ಮೇಲೆ ಉಪಸ್ಥಿತರಿದ್ದರು.
ಪಂದ್ಯಾಟದಲ್ಲಿ ಪ್ರಥಮ ಸ್ಥಾನವನ್ನು ಫ್ರೆಂಡ್ಸ್ ಕಿರಿಮಿಂಜೇಶ್ವರ, ದ್ವಿತೀಯ ಸ್ಥಾನವನ್ನು ಜೀವನ್ ಫ್ರೆಂಡ್ಸ್, ತೃತೀಯ ಸ್ಥಾನವನ್ನು ಬೆನಕ ಗ್ರೂಪ್ಸ್ ಚತುರ್ಥ ಸ್ಥಾನವನ್ನೂ ಡಾಲ್ಫಿನ್ ಫ್ರೆಂಡ್ಸ್ ಪಡೆದುಕೊಂಡಿತು.