ಬ್ರಹ್ಮಾವರ : ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯ ಮೇಲ್ವಿಚಾರಕಿ ಆಶಾದೇವಿ ಕೇಶವ ನಾಯಕ್ ಅವರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ
Published
2
ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯ ಬ್ರಹ್ಮಾವರ ಮೇಲ್ವಿಚಾರಕಿ ಆಶಾದೇವಿ ಕೇಶವ ನಾಯಕ್ ಇವರಿಗೆ ಸರಕಾರಿ ನೌಕರರ ದಿನಾಚರಣೆ ಅಂಗವಾಗಿ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ಇಂದು ಉಡುಪಿ ಜಿಲ್ಲಾಧಿಕಾರಿಗಳ ಕಛೇರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನೀಡಿ ಗೌರವಿಸಲಾಯಿತು.
ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್, ಮುಖ್ಯ ಕಾರ್ಯನಿರ್ವಣಾಧಿಕಾರಿ ಡಾ.ನವೀನ್ ಭಟ್, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
ತರಕಾರಿ ಬೆಳೆ, ಸ್ವಚ್ಛತೆ, ಹೂ ತೋಟ ಇನ್ನಿತರ ವಿಚಾರವಾಗಿ ಇಲ್ಲಿನ ಮಾದರಿ ವಸತಿ ನಿಲಯದ ಕುರಿತು ದಿಕ್ಸೂಚಿಯಲ್ಲಿ ಡಿಸೆಂಬರ್ 28 ರಂದು ವಿಶೇಷ ವರದಿ ಮಾಡಿ ಗಮನಸೆಳೆಯಲಾಗಿತ್ತು .