ಕರಾವಳಿ

ಪರ್ಕಳ : ತೀವ್ರ ಕುತೂಹಲ ಕೆರಳಿಸಿದೆ ಬೃಹತ್ ಹೊಂಡ!

2


ಪರ್ಕಳ : ಕೆಳಪರ್ಕಳದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕೆಲಸ ಭರದಿಂದ ಸಾಗುವ ವೇಳೆ ಕಿರುಸೇತುವೆ ನಿರ್ಮಾಣ ಹಂತದಲ್ಲಿರುವಾಗ ಗದ್ದೆಯಜಾಗದಲ್ಲಿ ಮಣ್ಣು ತೆಗೆಯುವಾಗ ಬೃಹತ್ ಗಾತ್ರದ ಹೊಂಡವೊಂದು ಗದ್ದೆ ತಳಭಾಗದಲ್ಲಿ ಕಾಣಸಿಕ್ಕಿದ್ದು ಕುತೂಹಲಕ್ಕೆ ಕಾರಣವಾಗಿದೆ.

ಇದೊಂದು ಗುಹಾ ಸಮಾಧಿ ಇರಬಹುದೇ, ಅಥವಾ ಸುರಂಗ ಮಾರ್ಗವೇ ಎಂಬುದು ಎಲ್ಲರಲ್ಲಿ ಕೌತುಕ ಹುಟ್ಟ ಲಾರಂಭಿಸಿದೆ. ಗದ್ದೆಯ ಒಳಪದರ ಇಷ್ಟೊಂದು ಹೊಂಡಮಯವಾಗಿರುವುದು ಎಲ್ಲರಲ್ಲಿ ಕೌತುಕ ಹೆಚ್ಚಿದೆ.

ಕೆಳಪರ್ಕಳದಲ್ಲಿ ಮಾತ್ರ ರಾಷ್ಟ್ರೀಯ ಹೆದ್ದಾರಿ ವಿನ್ಯಾಸ ಬದಲಾವಣೆ ಮಾಡಿ ನೇರ ರಸ್ತೆ ಕಾಮಗಾರಿ ಮಾಡಿರುವುದರಿಂದ ಈ ಭಾಗದ ಗದ್ದೆ ಗುಡ್ಡಗಳನ್ನು ಸಮತಟ್ಟು ಮಾಡುವುದೆ ಹೆಚ್ಚಿನ ಶ್ರಮ ವಹಿಸಬೇಕಾಗುತ್ತದೆ. ಈ ತರಹದ ಹೊಂಡ ಕಾಣಿಸಿರುವುದು ನನ್ನ ಅನುಭವದಲ್ಲಿ ಇದೇ ಮೊದಲು ಎಂದು ಗುತ್ತಿಗೆದಾರರಪರ ಕರ್ತವ್ಯ ನಿರತ ಇಂಜಿನಿಯರ್ ಜೊಸ್ ಅವರು ತಿಳಿಸಿದ್ದಾರೆ.

Advertisement. Scroll to continue reading.


ಸ್ಥಳೀಯರಾದ ಗಣೇಶ್ ರಾಜ್ ಸರಳಬೆಟ್ಟು, ರಾಜೇಶ್ ಪ್ರಭು ಪರ್ಕಳ, ಗಣಪತಿ ನಾಯಕ್, ಸತೀಶ್ ಶೆಟ್ಟಿ , ಮೊದಲಾದವರು ಜೊತೆಗಿದ್ದರು.

ಈ ಭಾಗದ ಗದ್ದೆಗಳಿಗೆ ಪೆರ್ಮರಿ ಗದ್ದೆಎಂದು ತುಳು ತುಳು ಭಾಷೆಯಲ್ಲಿ ಕರೆಯುತ್ತಾರೆ. ಹಾಗಾಗಿ ಜನರಲ್ಲಿ ಆಸಕ್ತಿ ಇನ್ನಷ್ಟು ಹೆಚ್ಚಿದೆ. ಪೆರ್ಮರಿ ಎಂದರೆ (ಹೆಬ್ಬಾವು ಕೂರುವ ಜಾಗ)ಇದ್ದಲ್ಲಿ ಇನ್ನಷ್ಟು ಇದೆ ಎಂದು ಎಲ್ಲರೂ ಆಶಾಭಾವನೆಯಿಂದ ಇದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com