ಬಾರಕೂರು ವಿದ್ಯಾಭಿವರ್ಧಿನಿ ಸಂಘ, ನೇಶನಲ್ ಹೈಸ್ಕೂಲ್ ಮತ್ತು ಪದವಿ ಪೂರ್ವ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಅಮೃತ ಮಹೋತ್ಸವ ಸಮಿತಿಯ ಸಮಾಲೋಚನಾ ಸಭೆ
Published
1
ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಸ್ವಾತಂತ್ರ್ಯ ಪೂರ್ವದ ಶಿಕ್ಷಣ ಸಂಸ್ಥೆಯಾದ ಬಾರಕೂರು ವಿದ್ಯಾಭಿವರ್ಧಿನಿ ಸಂಘ, ನೇಶನಲ್ ಹೈಸ್ಕೂಲ್ ಮತ್ತು ಪದವಿ ಪೂರ್ವ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಅಮೃತ ಮಹೋತ್ಸವ ಸಮಿತಿಯ ಸಮಾಲೋಚನಾ ಸಭೆ ಬ್ರಹ್ಮಾವರ ಆಶ್ರಯ ಸಭಾಂಗಣದಲ್ಲಿ ಶನಿವಾರ ಸಂಜೆ ನಡೆಯಿತು.
ಈ ಸಂದರ್ಭ ಸಮಿತಿಯ ಅಧ್ಯಕ್ಷ ರಾಜಾರಾಮ್ ಶೆಟ್ಟಿ ಮಾತನಾಡಿ, ಸುಮಾರು 7 ಸಾವಿರ ಮಂದಿ ಹಳೆ ವಿದ್ಯಾರ್ಥಿಗಳನ್ನು ಹೊಂದಿದ ಬಾರಕೂರು ಹೈಸ್ಕೂಲ್‍ಗೆ ದೇಶ ವಿದೇಶದಲ್ಲಿ ಉನ್ನತ ಸ್ಥಾನಮಾನ ಹೊಂದಿದವರಿದ್ದಾರೆ. ಅವರೆಲ್ಲರನ್ನು ಒಂದು ಗೂಡಿಸಿ ಶಾಲೆಗೆ ಹೊಸ ಕಾಯಕಲ್ಪ ನೀಡುವುದು ಮತ್ತು ಇಂದಿನ ಶಿಕ್ಷಣಕ್ಕೆ ಪೂರಕವಾಗುವ ಯೋಜನೆಯನ್ನು ರೂಪಿಸಿ ಶಾಲೆಯನ್ನು ಮುನ್ನಡೆಸುವ ಕಾರ್ಯ ಮಾಡಿ ಚಿರಕಾಲ ಬಾರಕೂರು ಶಿಕ್ಷಣ ಸಂಸ್ಥೆಯನ್ನು ಉಳಿಸುವ ಮತ್ತು ಬೆಳೆಸುವ ಕಾರ್ಯ ಮಾಡಬೇಕಾಗಿದೆ ಎಂದರು.
Advertisement. Scroll to continue reading.
ನಿವೃತ್ತ ಪ್ರಿನ್ಸಿಪಾಲ್ ಬಿ.ಸೀತಾರಾಮ ಶೆಟ್ಟಿ ಹಳೆ ವಿದ್ಯಾರ್ಥಿಗಳನ್ನು ಭೇಟಿಯಾಗಲು ತಾನು ಎಲ್ಲಾ ಕಡೆಗೆ ಬರುತ್ತೇನೆ ಎಂದರು.
ನಿವೃತ್ತ ಉಪನ್ಯಾಸಕ ರಾಘವೇಂದ್ರ ಭಟ್ ಮಾತನಾಡಿ, ಹಳೆ ವಿದ್ಯಾರ್ಥಿಗಳನ್ನು ಸಂಘಟಿಸುವ ಹೊಣೆಗಾರಿಕೆ ಮುಖ್ಯವಾಗಿದೆ ಮತ್ತು ಆಂಗ್ಲ ಭಾಷಾ ಮೋಹದಿಂದ ಮಾತೃ ಭಾಷೆ ಯನ್ನು ಮರೆಯುವ ಹಂತ ಬಂದಿದೆ ಅದನ್ನು ಉಳಿಸುವ ಕಾರ್ಯ ಕೂಡಾ ಆಗ ಬೇಕಾಗಿದೆ ಎಂದರು. ಈ ಸಂದರ್ಭ 45 ವರ್ಷದವರಿಂದ ತೊಡಗಿ 85 ವರ್ಷ ಪ್ರಾಯದ ಅನೇಕ ಹಳೆ ವಿದ್ಯಾರ್ಥಿಗಳು ಕಾರ್ಯಕ್ರಮಕ್ಕೆ ಬೆಂಬಲ ವ್ಯಕ್ತ ಪಡಿಸಿ, ತಮ್ಮ ದೇಣಿಗೆಯಾಗಿ ಹಣದ ನೆರವನ್ನು ಘೋಷಿಸಿದರು.
ಸಮಿತಿಯ ಮಹೇಶ್ ಉಡುಪ, ಕೃಷ್ಣ ಹೆಬ್ಬಾರ್, ಮಂಜುನಾಥ್ ಭಟ್, ರಾಮಚಂದ್ರ ಕಾಮತ್, ಗೋಪಾಲ್ ನಾಯ್ಕ್, ಚಂದ್ರಶೇಖರ ಶೆಟ್ಟಿ ಉಪಸ್ಥಿತರಿದ್ದರು.