ಪುಣೆ : ಕೆಲಸದಿಂದ ವಜಾ ಮಾಡಿದ ಕಾರಣಕ್ಕಾಗಿ ನೌಕರನೋರ್ವ ಯಜಮಾನಿಗೆ ಬೆಂಕಿಹಚ್ಚಿದ್ದು, ಆಕೆ ಆತನನ್ನೂ ಬೆಂಕಿಯಲ್ಲಿ ಎಳೆದುಕೊಂಡಿದ್ದರಿಂದ ಇಬ್ಬರು ಮೃತಪಟ್ಟ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.
ಬಾಳ ನೋಯ ಜರ್ನಿ (32) ಮೃತ ಮಹಿಳೆ. ಮಿಲಿಂದ್ ಗೋವಿಂದರಾವ್ ನಾಥಸಾಗರ್ ಮೃತ ನೌಕರ.
ಮೃತ ಮಹಿಳೆ ವಡಗಾಂವ್ ಶೇರಿಯ ಸೋಮನಾಥ ನಗರದಲ್ಲಿ ಹೊಲಿಗೆ ಅಂಗಡಿ ನಡೆಸುತ್ತಿದ್ದಳು. ಕೆಲ ದಿನಗಳ ಹಿಂದೆ ಮನೆಗೆಲಸದಿಂದ ನೌಕರನನ್ನು ವಜಾ ಮಾಡಿದ್ದಳು. ಇದರಿಂದ ಕೋಪಗೊಂಡ ನೌಕರ, ಮಹಿಳೆ ಮೇಲೆ ಸೋಮವಾರ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದು, ಆ ವೇಳೆ ಮಹಿಳೆ ಪಕ್ಕದಲ್ಲಿದ್ದ ನೌಕರನನ್ನು ಎಳೆದುಕೊಂಡಿದ್ದಾಳೆ.
Advertisement. Scroll to continue reading.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಗಾಯಾಳುಗಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಬೆಂಕಿ ಹಚ್ಚಿದ್ದ ನೌಕರ ಅದೇ ದಿನ ಸಾವನ್ನಪ್ಪಿದ್ದು, ಮಹಿಳೆ ಮರುದಿನ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾಳೆ. ಇಬ್ಬರ ಜಗಳವನ್ನು ಬಿಡಿಸಲು ಬಂದಿದ್ದ ಪಕ್ಕದ ಮೊಬೈಲ್ ಅಂಗಡಿಯ ವ್ಯಕ್ತಿಗೆ ಶೇಕಡ 35ರಷ್ಟು ಸುಟ್ಟಗಾಯಗಳಾಗಿವೆ. ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಚಂದನನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.