ಕೆಳಪರ್ಕಳದ ಸುರಂಗ ಬಳಿಯ ಕಾಮಗಾರಿ ಸ್ಥಳಕ್ಕೆ ಡಿಸಿ ಕೂರ್ಮರಾವ್ ಭೇಟಿ; ಪರಿಶೀಲನೆ
Published
1
ಪರ್ಕಳ: ಕೆಳಪರ್ಕಳದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ(169 ಎ.) ಸೇತುವೆಯ ಕಾಮಗಾರಿ ನಡೆಯುವ ಸ್ಥಳಕ್ಕೆ ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಸುರಂಗದ ಬಳಿ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯ ಪ್ರಗತಿ ಪರಿಶೀಲಿಸಿದರು.
ಮುಂದೆ ನಡೆಯುತ್ತಿರುವ ಕಾಮಗಾರಿಗಳ ಬಗ್ಗೆ ಸಂಬಂಧಪಟ್ಟ ಹೆದ್ದಾರಿ ಇಲಾಖೆ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದರು. ಉಡುಪಿ ನಗರಸಭೆಯ ಅಧಿಕಾರಿಗಳುಕೂಡ ಜೊತೆಗಿದ್ದಿದ್ದರು ಕೆಳಪರ್ಕಳದಲ್ಲಿ ಇತ್ತೀಚೆಗೆ ಕಾಮಗಾರಿ ನಡೆಯುತ್ತಿರುವಾಗ ಪ್ರದೇಶದಲ್ಲಿರುವ (ಪೆರ್ಮರಿ ಖಂಡ )ಗದ್ದೆಯಲ್ಲಿರುವ ಸುರಂಗದಂತೆ ಕಂಡ ಪ್ರದೇಶಕ್ಕೂ ಭೇಟಿ ನೀಡಿ ತಜ್ಞ ಇಂಜಿನಿಯರ್ ಗಳ ಜೊತೆ ಮಾತುಕತೆ ನಡೆಸಿದರು.
ಈ ಸಂದರ್ಭದಲ್ಲಿ ಹೆದ್ದಾರಿಇಲಾಖೆಯ ಇಂಜಿನಿಯರ್, ನಗರಸಭೆಯ ಅಧಿಕಾರಿಗಳು ಉಪಸ್ಥಿತರಿದ್ದರು.