Uncategorized

ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವವನ್ನು ಮರಳಿ ಧೋನಿಗೆ ವಹಿಸಿದ ಜಡೇಜಾ!

1

ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವದಿಂದ ರವೀಂದ್ರ ಜಡೇಜಾ ಕೆಳಗಿಳಿದಿದ್ದಾರೆ. ಅಲ್ಲದೇ ನಾಯಕತ್ವವನ್ನು ಎಂಎಸ್ ಧೋನಿಗೆ ಹಸ್ತಾಂತರಿಸಿದ್ದಾರೆ.

ರವೀಂದ್ರ ಜಡೇಜಾ ಅವರ ನಾಯಕತ್ವವನ್ನು ತ್ಯಜಿಸುವ ನಿರ್ಧಾರದ ಬಗ್ಗೆ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳಿಗೆ ಹೇಳಿಕೆಯ ಮೂಲಕ ತಿಳಿಸಿದೆ.

‘ರವೀಂದ್ರ ಜಡೇಜಾ ಅವರು ತಮ್ಮ ಆಟದ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಲು ನಾಯಕತ್ವವನ್ನು ತ್ಯಜಿಸಲು ನಿರ್ಧರಿಸಿದ್ದಾರೆ. ಎಂ.ಎಸ್. ಧೋನಿ ಸಿ ಎಸ್ ಕೆ ಅನ್ನು ಮುನ್ನಡೆಸಲು ವಿನಂತಿಸಿದ್ದಾರೆ.

Advertisement. Scroll to continue reading.

ಎಂ. ಎಸ್ ಧೋನಿ ಹೆಚ್ಚಿನ ಆಸಕ್ತಿಯಿಂದ ಸಿ ಎಸ್ ಕೆ ಅನ್ನು ಮುನ್ನಡೆಸಲು ಒಪ್ಪಿಕೊಂಡಿದ್ದಾರೆ ಮತ್ತು ಜಡೇಜಾ ಅವರ ಆಟದ ಮೇಲೆ ಕೇಂದ್ರೀಕರಿಸಲು ಅವಕಾಶ ಮಾಡಿಕೊಟ್ಟಿದ್ದಾರೆ.

ಈ ಸಲದ ಐಪಿಎಲ್ ನಲ್ಲಿ ಚೆನೈಗೆ ಭಾರೀ ಹಿನ್ನಡೆಯಾಗಿದ್ದು ಎಂಟು ಪಂದ್ಯಗಳಲ್ಲಿ ಕೇವಲ ಎರಡರಲ್ಲಿ ಗೆದ್ದಿದ್ದು ಆರು ಪಂದ್ಯಗಳಲ್ಲಿ ಹೀನಾಯ ಸೋಲು ಅನುಭವಿಸಿದೆ. ಪಾಯಂಟ್ ಪಟ್ಟಿಯಲ್ಲಿ ಕೆಳ ಸ್ಥಾನದಲ್ಲಿ ಇದೆ.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com