ಬ್ರಹ್ಮಾವರ : ಕಾರ್ಮಿಕರ ದಿನಾಚರಣೆ : ಕಾರ್ಮಿಕರಿಗೆ ಶಾಲು ಹೊದೆಸಿ ಗೌರವಿಸಿದ ಮಾಲೀಕ
Published
0
ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಕಾರ್ಮಿಕ ದಿನಾಚರಣೆ ಅಂದರೆ ಕೇವಲ ಸರಕಾರಿ ರಜೆ ಪಡೆದು ಮನೆಯಲ್ಲಿ ಕುಳಿತು ಕೊಳ್ಳುವ ದಿನವಲ್ಲ ಅಂದು ಕಾರ್ಮಿಕರಿಗೆ ಹಬ್ಬವಾಗಬೇಕು. ಆದರೆ ಕಾರ್ಮಿಕರಿಗೆ ಇಂದಿಗೂ ದುಡಿದರೆ ಮಾತ್ರ ಅವರಿಗೆ ಅವರ ಕುಟುಂಬ ಸಾಕಣೆ ಮತ್ತು ಊಟಕ್ಕೆ ದುಡಿಯಲೇಬೇಕು.
ಬ್ರಹ್ಮಾವರದ ಸಾಮಾಜಿಕ ಕಾರ್ಯಕರ್ತ ಉಮೇಶ್ ಪೂಜಾರಿಯವರು ಅದಕ್ಕೆ ಭಿನ್ನ. ಹಿಂದೆ ಕಾರ್ಮಿಕರಾಗಿದ್ದ ಅವರು ಈಗ ಅವರು ತೆರೆದ ಬಾವಿಯ ಕೆಲಸವನ್ನು ಗುತ್ತಿಗೆಯಲ್ಲಿ ಮಾಡುತ್ತಾರೆ ಅವರೊಂದಿಗೆ ಹಲವಾರು ಕಾರ್ಮಿಕರು ದುಡಿಯುತ್ತಾರೆ. ಮೇ ದಿನದ ಅಂಗವಾಗಿ ಅವರು ಕೆಲಸಗಾರರೊಂದಿಗೆ ಅವರು ಕೂಡಾ ಕೆಲಸ ಮಾಡುವುದಲ್ಲದೆ, ಅವರಿಗೆ ಇಂದು ಕೆಲಸ ಮಾಡುವಲ್ಲಿ ವಿಶೇಷ ಊಟ ತಿಂಡಿ ವ್ಯವಸ್ಥೆ ಜೊತೆಗೆ ಕೆಲಸ ಮಾಡುವಲ್ಲಿ ಕಾರ್ಮಿಕರನ್ನು ಗೌರವಿಸುವ ಕೆಲಸ ಕೆಲವು ವರ್ಷದಿಂದ ಮಾಡಿಕೊಂಡು ಬಂದಿದ್ದಾರೆ.
ಇಂದು ಕೂಡಾ ಅವರು ಅವರ ಕಾರ್ಮಿಕರನ್ನು ಬ್ರಹ್ಮಾವರ ಬಳಿಯಲ್ಲಿ ತೆರೆದ ಬಾವಿ ಕೆಲಸ ಮಾಡುವ ಜಾಗದಲ್ಲಿ ಕಾರ್ಮಿಕರನ್ನು ಗೌರವಿಸಿ ಕಾರ್ಮಿಕ ದಿನಾಚರಣೆಯನ್ನು ಮಾಡಿ ಮಾದರಿಯಾಗಿದ್ದಾರೆ.
ನಾನು ಮಾಲಿಕ, ನಾನು ಕಾರ್ಮಿಕ ಎಂಬ ಭಾವನೆ ಇಲ್ಲದೆ ಒಂದೇ ಕುಟುಂಬದವರಂತೆ ಇದ್ದೇವೆ. ಅವರು ಕೊಟ್ಟ ಸೇವೆಯಿಂದ ನನ್ನೆಲ್ಲಾ ಕೆಲಸಗಳು ಸುಸೂತ್ರವಾಗಿ ನಡೆಯುತ್ತವೆ. ಮೇ 1 ರಂದು ಸ್ಟೇಟಸ್ ಹಾಕಲು ಕಾರ್ಮಿಕರ ದಿನಾಚರಣೆ ಮಾಡದೆ, ಎಲ್ಲರೂ ಪ್ರತಿದಿನ ಕಾರ್ಮಿಕರೊಂದಿಗೆ ಕಾರ್ಮಿಕರಾಗಿ ಸಮಾನಭಾವದಿಂದ ಕಾಣಬೇಕು.ಉಮೇಶ್ ಪೂಜಾರಿ, ಮಾಲಕ
0 ಬ್ರಹ್ಮಾವರ : ರುಡ್ ಸೆಟ್ ಬ್ರಹ್ಮಾವರ ಮತ್ತು ಸ್ಮಾರ್ಟ್ ಕ್ರೀಯೇಶನ್ಸ್ ಎಜ್ಯುಕೇಶನ್ ಟ್ರಸ್ಟ್ ಹೈಕಾಡಿ ಸಂಸ್ಥೆಯ ಸಹಭಾಗಿತ್ವದಲ್ಲಿ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹೈಕಾಡಿಯಲ್ಲಿ ಮೇಣದಬತ್ತಿ ತಯಾರಿಕಾ ತರಬೇತಿ ಉದ್ಘಾಟನೆಗೊಂಡಿತು. ಆವರ್ಸೆ...