ಶ್ರೀಭದ್ರಕಾಳಿ ದೇವಸ್ಥಾನ ಚಣಕ್ಕಳಿ ಬಡಾಕೆರೆ ಪ್ರಥಮ ವರ್ಧಂತ್ಯೋತ್ಸವ
Published
0
ವರದಿ : ದಿನೇಶ್ ರಾಯಪ್ಪನಮಠ
ಬೈಂದೂರು : ತಾಲೂಕಿನ ತಾಲೂಕಿನ ಸುಪ್ರಸಿದ್ಧ ದೇವಸ್ಥಾನ ಶ್ರೀ ಭದ್ರಕಾಳಿ ದೇವಸ್ಥಾನ ಚಣಕ್ಕಳಿ ಬಡಾಕೆರೆ ಪ್ರಥಮ ವರ್ಧಂತ್ಯೋತ್ಸವ ಧಾರ್ಮಿಕ ವಿಧಿ ವಿಧಾನದ ಮೂಲಕ ನಡೆಯಿತು.
ದೇವಾತ ಪ್ರಾರ್ಥನೆ ,ಪಂಚಗವ್ಯ, ಪುಣ್ಯಹ ವಾಚನ, ನವಕುಂಭ ಕಳಶ ಸ್ಥಾಪನೆ, ಕಲಾತತ್ವ ಸ್ನಪನಾಧಿವಾಸಹೋಮ, ಫಲಪಂಚಾಮೃತಾಭಿಷೇಕ, ಬ್ರಹ್ಮಕಲಶಾಭಿಷೇಕ, ಶ್ರೀ ದೇವರಿಗೆ ವಿಶೇಷ ಮಹಾಪೂಜೆ ಹಾಗೂ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.
ಸಂಜೆ ಶ್ರೀ ರಾಮ ಭಜನಾ ಮಂಡಳಿ ಬಡಾಕೆರೆ ಇವರಿಂದ ಭಜನಾ ಕಾರ್ಯಕ್ರಮ ಇಂದು ಸಡಗರ ಸಂಭ್ರಮದಲ್ಲಿ ನಡೆಯಿತು.