ಬ್ರಹ್ಮಾವರ : ಇಂದು ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಸಂಭ್ರಮ; ಸಾಮೂಹಿಕ ಪ್ರಾರ್ಥನೆ
Published
0
ಬ್ರಹ್ಮವಾರ : ಬ್ರಹ್ಮಾವರ ಭಾಗದಲ್ಲಿ ಮುಸ್ಲಿಂ ಬಾಂಧವರಿಂದ ನಾನಾ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ಜರುಗಿತು. ಕುಂಜಾಲು ನೂರ್ ಜುಮ್ಮಾ ಮಸೀದಿಯಲ್ಲಿ ಮುಸ್ಲಿಂ ಭಾಂಧವರಿಂದ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆಯಾದ ಬಳಿಕ ಎಲ್ಲರೂ ಪರಸ್ಪರ ಸ್ನೇಹ ಭಾವವನ್ನು ವಿನಿಮಯ ಮಾಡಿಕೊಂಡರು.
ಇಲ್ಲಿನ ಇಮಾಮ್ರಾದ ಮಹ್ಮದ್ ಶಫೀಕ್ ನಿಜಾಮಿ ಈ ಸಂದರ್ಭ ರಂಜಾನ್ ಹಬ್ಬದ ಸಂದೇಶ ನೀಡಿ, ಜಗತ್ತು ಪರಸ್ಪರ ಸ್ನೇಹ ಭಾವದಿಂದ ಇರುವುದನ್ನು ಇಸ್ಲಾಂ ಬಯಸುತ್ತದೆ.
ಮಾನವರು ಹಿಂಸೆ ಮತ್ತು ಅಧರ್ಮವನ್ನು ತ್ಯಜಿಸಿ ಮಾನವರಾಗಿ ಜೀವಿಸುವಂತೆ ಸರ್ವಶಕ್ತ ದೇವರು ಅನುಗ್ರಹಿಸಲಿ ಎಂದರು.
ಇಲ್ಲಿನ ಮಟಪಾಡಿ ರಹಮುನಿಯಾ ಜುಮ್ಮಾ ಮಸೀದಿಯಲ್ಲಿ ಕೂಡಾ ಮುಸ್ಲಿಂ ಭಾಂದವರಿಂದ ಸಾಮೂಹಿಕ ಪ್ರಾರ್ಥನೆ ಜರುಗಿತು.
ಬಳಿಕ ಇಲ್ಲಿನ ಕಬರಸ್ಥಾನದಲ್ಲಿ ಸರ್ವ ಆತ್ಮಗಳಿಗೆ ಮುಕ್ತಿ ಮತ್ತು ಮೋಕ್ಷ ಸಿಗುವಂತೆ ಇಲ್ಲಿನ ಖತೀಬರಾದ ಅಬ್ದುಲ್ ಮಝೀದ್ ಸಖಾಫಿ ಪ್ರಾರ್ಥನೆ ಸಲ್ಲಿಸಲಾಯಿತು. ಸಂದೇಶ ನೀಡಿದ ಹಾಜಿ ಕೆ,ಪಿ ಇಬ್ರಾಹಿಂ ಸಾಹೇಭ್ ಸರ್ವ ಆತ್ಮರ ದೇವರು ಭೂಮಿಯಲ್ಲಿ ಮಾನವರಾಗಿ ಜನ್ಮ ಪಡೆದು ಮೃತರಾದ ಆತ್ಮಗಳಿಗೆ ಮೋಕ್ಷ ಸಿಗುವಂತೆ ಪ್ರಾರ್ಥನೆ ನೀಡುವುದು ನಮ್ಮ ಸಂಪ್ರದಾಯ ಅದರಂತೆ ಇಂದು ಸಾಮೂಹಿಕ ಪ್ರಾರ್ಥನೆ ನೀಡಲಾಗಿದೆ ಎಂದರು.