ಹಿರಿಯಡಕ : ಶ್ರೀದಶಾವತಾರ ಯಕ್ಷಗಾನ ಕಲಾ ಮಂಡಳಿ ಕಾಜಾರಗುತ್ತು : 35 ನೇ ವರ್ಷದ ವಾರ್ಷಿಕೋತ್ಸವ; ಸನ್ಮಾನ
Published
2
ಹಿರಿಯಡಕ : ಶ್ರೀದಶಾವತಾರ ಯಕ್ಷಗಾನ ಕಲಾ ಮಂಡಳಿ ಕಾಜಾರಗುತ್ತು ಇದರ 35 ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ನಡೆಯಿತು.
ಈ ಸಂದರ್ಭ ಗುರುಗಳಾದ ಅನಂತಪದ್ಮನಾಭ ಭಟ್ ಹಾಗೂ ರಾಮಮೂರ್ತಿ ರಾವ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಎಂ.ಅಚ್ಯುತ್ ನಾಯಕ್, ಕಾರ್ಯದರ್ಶಿ ವಿಠಲ್ ಕಾಮತ್, ಚಂದ್ರಶೇಖರ್ ಆಚಾರ್, ದೇವೇಂದ್ರ ನಾಯಕ್, ವಿಠಲ್ ನಾಯಕ್, ಶ್ರೀನಿವಾಸ್ ನಾಯಕ್, ಸತ್ಯಾನಂದ ನಾಯಕ್, ಅನುಪಮಾ, ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು.
ಈ ವೇಳೆ ಧ್ರುವ ಚರಿತ್ರೆ ಹಾಗೂ ಶಶಿಪ್ರಭಾ ಪರಿಣಯ ಯಕ್ಷಗಾನ ಪ್ರಸಂಗಗಳು ನಡೆದವು.