ಉಡುಪಿ : ಕಳೆದ ವರ್ಷ ಜೂನ್ ಒಂದರಿಂದ ಖಾಸಗಿ ಬಸ್ ದರ ಶೇಕಡ 25% ಏರಿಕೆ ಹಾಗೂ 50% ಪರ್ಸೆಂಟ್ ಮಾತ್ರ. ಪ್ರಯಾಣಿಕರನ್ನು ತುಂಬಿಸಿಕೊಂಡು ಸಾರಿಗೆ ಸೇವೆ ನೀಡುವಂತೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದರು
ಇ ದರವು ಕೋವಿಡ್ ಸಂದರ್ಭದಲ್ಲಿ ಮಾತ್ರ ಅನ್ವಯವಾಗುವಂತೆ ಇತ್ತು, ಆದರೆ ಈಗಲೂ ಹೆಚ್ಚುವರಿ ದರವನ್ನು ಖಾಸಗಿ ಬಸ್ ಮಾಲಕರು ವಸೂಲು ಮಾಡುತ್ತಿದ್ದು ಹಾಗೂ ಶೇ 100% ಆಸನ. ಭರ್ತಿ ಮಾಡಿಕೊಂಡು ಸಂಚರಿಸುವ ಬಸ್ಸುಗಳು ಕಾರ್ಯ ಸಂಚರಿಸುತ್ತಿವೆ.
ಜಿಲ್ಲೆಯಲ್ಲಿ ಕೊರೊನ ಸಂಖ್ಯೆ ಇಳಿಮುಖವಾದರೂ ಉಡುಪಿ ಜಿಲ್ಲಾಧಿಕಾರಿ ಅಂದಿನ ಸಭೆಯಲ್ಲಿ ಹೆಚ್ಚಿಸಿದ ದರವನ್ನು ದರವನ್ನೇ ಮಾನದಂಡವಾಗಿಯೇ ಈಗಲೂ ಸಹ ಖಾಸಗಿ ಬಸ್ಸು ಮಾಲಕರು ದರ ವಸೂಲಿ ಮಾಡಿ ಸೇವೆ ನೀಡುತ್ತಿದ್ದಾರೆ, ಆದರೆ ಪ್ರಸ್ತುತ ಅವಧಿಯಲ್ಲಿ ಸಾರ್ವಜನಿಕರಿಂದ ಖಾಸಗಿ ಬಸ್ ಮಾಲಕರು ವಸೂಲು ಮಾಡುತ್ತಿರುವುದು, ಸರಿಯಾದ ಕ್ರಮವಲ್ಲ. ಆದುದರಿಂದ ಸಾರಿಗೆ ಅಧಿನಿಯಮದಂತೆ ಮರುದರಪರಿಷ್ಕರಣೆ ಮಾಡಿ, ಸಾರ್ವಜನಿಕ ಹಿತಾಸಕ್ತಿಯ ಮೇರೆಗೆ ಹಾಗೂ ಶಾಸಕರ ಸೂಚನೆಯ ಮೇರೆಗೆ ಉಡುಪಿಯ ಜಿಲ್ಲಾಧಿಕಾರಿ ಮಾನ್ಯ ಕೂರ್ಮಾರಾವ್ರವರು ಶೀಘ್ರ ಖಾಸಗಿ ಬಸ್ ಮಾಲಕರ ಸಭೆ ಕರೆದು, ದರ ಇಳಿಸಿ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕಾಗಿ ಸಾರ್ವಜನಿಕರ ಪರ ಬಸ್ ಪ್ರಯಾಣಿಕ ಹಾಗೂ ಸಾಮಾಜಿಕ ಜನಪರ ಚಿಂತಕ ಶಿವಕುಮಾರ ಶೆಟ್ಟಿಗಾರ್ ಉಡುಪಿ ಜಿಲ್ಲಾಧಿಕಾರಿ ಗೆ ಮನವಿ ಸಲ್ಲಿಸಿದ್ದಾರೆ.
Advertisement. Scroll to continue reading.