ಬಾರಕೂರು :ಶ್ರೀಸರಸ್ವತಿನಾರಾಯಣಿ ದೇವಸ್ಥಾನ ಮಹಾಲಕ್ಷ್ಮೀ ಕ್ಷೇತ್ರ ಮೂಡುಕೇರಿ; ಪುನ:ಪ್ರತಿಷ್ಠೆ ಮತ್ತು ಬ್ರಹ್ಮಕುಂಭಾಭಿಷೇಕ
Published
1
ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ: ಶ್ರೀಸರಸ್ವತಿನಾರಾಯಣಿ ದೇವಸ್ಥಾನ ಮಹಾಲಕ್ಷ್ಮೀ ಕ್ಷೇತ್ರ ಮೂಡುಕೇರಿ ಬಾರಕೂರಿನಲ್ಲಿ ಮೇ 5 ರಿಂದ 9 ರ ತನಕ ನಾನಾ ಧಾರ್ಮಿಕ ಕಾರ್ಯಕ್ರಮದೊಂದಿಗೆ ಪುನ:ಪ್ರತಿಷ್ಠೆ ಮತ್ತು ಬ್ರಹ್ಮಕುಂಭಾಭಿಷೇಕ ಪ್ರಯುಕ್ತ ಗುರುವಾರ ಬೆಳಿಗ್ಗೆ ಪ್ರಧಾನ ಅರ್ಚಕ ಕೂಡ್ಲಿ ಗಣಪತಿ ಉಡುಪ ಇವರ ನೇತೃತ್ವದಲ್ಲಿ ನಾನಾ ಧಾರ್ಮಿಕ ಕಾರ್ಯಕ್ರಮ ಜರುಗಿತು.
ಸಂಜೆ ಕೊಟೇಕೇರಿ ಮಹಾತೋಭಾರ ಶ್ರೀಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆಯ ಬಳಿಕ ಶ್ರೀ ಸರಸ್ವತಿ ನಾರಾಯಣಿ ದೇವಸ್ಥಾನದ ಧರ್ಮದರ್ಶಿ ಮಂಜುನಾಥ ಸೋಮಯಾಜಿ ಹೊರೆಕಾಣಿಕೆ ಮೆರವಣಿಗೆಗೆ ದೀಪ ಬೆಳಗಿ ಚಾಲನೆ ನೀಡಿದರು.
ಬಾರಕೂರು ರಥ ಬೀದಿಯಿಂದ ಸಾಗಿ ಬಂದ ಮೆರವಣಿಗೆಯಲ್ಲಿ ಮಹಿಳೆಯರ ಪೂರ್ಣ ಕುಂಭ, ಭಜನೆ, ಚಂಡೆ ಬಳಗ, ನಾನಾ ಟ್ಯಾಬ್ಲೊಗಳ ಮೂಲಕ ಕಾಲೇಜು ಬಳಿಯ ರಸ್ತೆಯಿಂದ ದೇವಸ್ಥಾನಕ್ಕೆ ತಲುಪಿತು. ಸುರೇಶ್ ನಾಯಕ್ ಪರ್ಕಳ, ಪ್ರವೀಣ್ ಚಂದ್ರ ಆತ್ರಾಡಿ ಮೆರವಣಿಗೆಯ ನೇತೃತ್ವ ವಹಿಸಿದ್ದರು.
ಬಾರಕೂರು ಗ್ರಾಮ ಪಂಚಾಯತಿ ಅಧ್ಯಕ್ಷ ಶಾಂತಾರಾಮ ಮತ್ತು ಶೆಟ್ಟಿ , ಸರಸ್ವತಿನಾರಾಯಣಿ ದೇವಸ್ಥಾನದ ಆಡಳಿತ ಮೋಕ್ತೇಸರ ಶಂಕರ ನಾಯಕ್, ಅಧ್ಯಕ್ಷ ಗೋವಿಂದ ನಾಯಕ್, ಪ್ರಧಾನ ಕಾರ್ಯದರ್ಶಿ ಚಂದ್ರ ನಾಯ್ಕ್ , ಕೋಶಾಧಿಕಾರಿ ರಾಘವ ನಾಯ್ಕ್ ಮತತು ಬ್ರಹ್ಮಕಲಶೋತ್ಸವ ಸಮಿತಿಯ ಪದಾಧಿಕಾರಿಗಳು ಮೆರವಣಿಗೆಯಲ್ಲಿದ್ದರು.
0 ಬ್ರಹ್ಮಾವರ : ರುಡ್ ಸೆಟ್ ಬ್ರಹ್ಮಾವರ ಮತ್ತು ಸ್ಮಾರ್ಟ್ ಕ್ರೀಯೇಶನ್ಸ್ ಎಜ್ಯುಕೇಶನ್ ಟ್ರಸ್ಟ್ ಹೈಕಾಡಿ ಸಂಸ್ಥೆಯ ಸಹಭಾಗಿತ್ವದಲ್ಲಿ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹೈಕಾಡಿಯಲ್ಲಿ ಮೇಣದಬತ್ತಿ ತಯಾರಿಕಾ ತರಬೇತಿ ಉದ್ಘಾಟನೆಗೊಂಡಿತು. ಆವರ್ಸೆ...