ಕೊಪ್ಪಳ : ವಿದ್ಯುತ್ ಹರಿದು ತಾಯಿ, ಇಬ್ಬರು ಮಕ್ಕಳು ಸ್ಥಳದಲ್ಲೇ ಮೃತಪಟ್ಟ ಹೃದಯವಿದ್ರಾವಕ ಘಟನೆ ಕನಕಗಿರಿ ತಾಲೂಕಿನ ಹುಲಿಹೈದರ್ ಗ್ರಾಮದಲ್ಲಿ ನಡೆದಿದೆ.
ತಾಯಿ ಶೈಲಮ್ಮ(28), ಮಕ್ಕಳಾದ ಪವನ್(2), ಸಾನ್ವಿ(3) ಮೃತ ದುರ್ದೈವಿಗಳು. ಮನೆಯಲ್ಲಿ ಬಟ್ಟೆ ಒಣ ಹಾಕುವಾಗ ವಿದ್ಯುತ್ ಸ್ಪರ್ಶಿಸಿ ಮೂವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ತಾಯಿ ಶೈಲಮ್ಮ ಬಟ್ಟೆ ಒಣಗಾಗುವ ವೇಳೆಯಲ್ಲಿ 2 ವರ್ಷದ ಮಗ ಪವನ್ ಅನ್ನು ಎತ್ತಿಕೊಂಡು, ಪಕ್ಕದಲ್ಲೇ ಇದ್ದ ಮತ್ತೊಬ್ಬ ಮೂರು ವರ್ಷದ ಮಗಳು ಸಾನ್ವಿಯನ್ನು ಇಟ್ಟುಕೊಂಡು ಒಣ ಹಾಕುತ್ತಿದ್ದರು. ಈ ವೇಳೆ ಹಸಿ ಬಟ್ಟೆ ವಿದ್ಯುತ್ ವಯರ್ ಗೆ ತಾಗಿದೆ. ಪರಿಣಾಮ ಶಾಕ್ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
Advertisement. Scroll to continue reading.
ಈ ಬಗ್ಗೆ ಕನಕಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.