ಮಣಿಪಾಲ: ಕಾರೊಂದು ಖಾಸಗಿ ಸಿಟಿ ಬಸ್ ಗೆ ಢಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕನ ತಲೆಗೆ ಗಂಭೀರ ಗಾಯವಾಗಿರುವ ಘಟನೆ ಈಶ್ವರನಗರದ ಹೆದ್ದಾರಿಯಲ್ಲಿ ನಡೆದಿದೆ.
ಪರ್ಕಳ ಕಡೆಯಿಂದ ಉಡುಪಿಗೆ ಸಾಗುತ್ತಿದ್ದ ಸಿಟಿ ಬಸ್ ಗೆ ಅತಿವೇಗದಿಂದ ಹಿಂದಿನಿಂದ ಬಂದು ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಕಾರು ಚಾಲಕನಿಗೆ ಗಂಭೀರ ಗಾಯವಾಗಿದೆ.
ಅಲ್ಲದೇ, ಕಾರು ಸಂಪೂರ್ಣ ಜಖಂಗೊಂಡಿದೆ. ಬಸ್ ನ ಹಿಂಭಾಗವೂ ನಜ್ಜುಗುಜ್ಜಾಗಿದೆ.
Advertisement. Scroll to continue reading.
ಬಸ್ನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಹಾನಿ ಸಂಭವಿಸಿಲ್ಲ ಎನ್ನಲಾಗಿದೆ. ಮಣಿಪಾಲ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿದ್ದಾರೆ.