ಸಪರಿವಾರ ಶ್ರೀದುರ್ಗಾಪರಮೇಶ್ವರೀ ಅಮ್ಮನವರ ದೇವಸ್ಥಾನ ಸಾಲಿಕೇರಿ: ಬ್ರಹ್ಮಕಲಶ, ಚಂಡಿಕಾಯಾಗ
Published
0
ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಸಪರಿವಾರ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ದೇವಸ್ಥಾನ ಸಾಲಿಕೇರಿಯಲ್ಲಿ ಬುಧವಾರ ವೇದ ಮೂರ್ತಿ ರಮೇಶ್ ಭಟ್ ನಾಯರ್ ಬೆಟ್ಟು ಇವರ ಪ್ರಧಾನ ಆಚಾರ್ಯತ್ವದಲ್ಲಿ ನಾನಾ ಧಾರ್ಮಿಕ ಕಾರ್ಯಕ್ರಮದೊಂದಿಗೆ ಬ್ರಹ್ಮಕಲಶ, ಚಂಡಿಕಾಯಾಗ, ದುರ್ಗಾ ಪೂಜೆ ಮತ್ತು ವಾರ್ಷಿಕ ಪೂಜೆ ಜರುಗಿತು.
ಸೂರ್ಯ ಮಾಸ್ಟರ್ ಮತ್ತು ತಾರಾಮತಿ ದಂಪತಿಗಳು ಸಂಕಲ್ಪ ಪೂಜಾ ಕಾರ್ಯದಲ್ಲಿ ಭಾಗಿಯಾಗಿದ್ದರು. ದೇವಸ್ಥಾನ ಸಮಿತಿಯ ಕರುಣಾಕರ ಶೆಟ್ಟಿ ಹಾರಾಡಿ , ಸಂತೋಷ ಶೆಟ್ಟಿ , ಆನಂದ, ಮತ್ತು ರಮೇಶ್ ಇನ್ನಿತರ ಪಧಾಧಿಕಾರಿಗಳು ಉಪಸ್ಥಿತರಿದ್ದರು. ಇದೇ ಸಂದರ್ಬದಲ್ಲಿ ಹಲವಾರು ದಾನಿಗಳನ್ನು ಗೌರವಿಸಲಾಯಿತು.
ನೂತನವಾಗಿ ರಚನೆಗೊಂಡ ಸ್ವಾಗತ ಗೋಪುರವನ್ನು ದೇವಸ್ಥಾನಕ್ಕೆ ಸಮರ್ಪಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನಾದಂ ಮೇಲೋಡಿಸ್ ಚಾಂತಾರು ಇವರಿಂದ ಭಕ್ತಿ ಸಂಗೀತ ಜರುಗಿತು.
ನೂರಾರು ಮಂದಿ ಪೂಜಾ ಕಾರ್ಯದಲ್ಲಿ ಮತ್ತು ಅನ್ನ ಸಂತರ್ಪಣೆಯಲ್ಲಿ ಭಾಗವಹಿಸಿದ್ದರು.