ನವದೆಹಲಿ: ಭಾರತದ ನೂತನ ಮುಖ್ಯ ಚುನಾವಣಾ ಆಯುಕ್ತರಾಗಿ ರಾಜೀವ್ ಕುಮಾರ್ ನೇಮಕಗೊಂಡಿದ್ದಾರೆ.
ಈಗಿನ ಮುಖ್ಯ ಚುನಾವಣಾ ಆಯುಕ್ತ ಸುಶಿಲ್ ಚಂದ್ರ 14ರಂದು ಹುದ್ದೆಯಿಂದ ನಿರ್ಗಮಿಸಲಿದ್ದಾರೆ. ನೂತನ ಕೇಂದ್ರ ಮುಖ್ಯ ಚುನಾವಣಾ ಆಯುಕ್ತರಾಗಿ, ಅತಿ ಹಿರಿಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಮೇ 15ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಪ್ರಸ್ತುತ ಸುಶೀಲ್ ಚಂದ್ರ ಭಾರತದ 24ನೇ ಮುಖ್ಯ ಚುನಾವಣಾ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕಾನೂನು ಸಚಿವಾಲಯವು ಹೊರಡಿಸಿದ ಮೇ 12ರ ಅಧಿಸೂಚನೆಯ ಪ್ರಕಾರ ಸಂವಿಧಾನದ 324ನೇ ವಿಧಿಯ ಷರತ್ತು (2) ರ ಅನುಸಾರವಾಗಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ನೇಮಕಾತಿಯನ್ನು ಮಾಡಿದ್ದಾರೆ. ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ಕಿರಣ್ ರಿಜಿಜು ಅವರು ಇಂದು ಈ ಕುರಿತು ಟ್ವಿಟರ್ ನಲ್ಲಿ ಟ್ವೀಟ್ ಮಾಡುವ ಮೂಲಕ ಈ ವಿಚಾರ ತಿಳಿಸಿದ್ದಾರೆ.
Advertisement. Scroll to continue reading.