ಲಕ್ನೋ : ಕುಡಿದ ಅಮಲಿನಲ್ಲಿ ಇಬ್ಬರು ವ್ಯಕ್ತಿಗಳು ಅಡ್ಡಾದಿಡ್ಡಿ ಕಾರು ಚಲಾಯಿಸಿದ ಪರಿಣಾಮದಿಂದ 12ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಓರ್ವನ ಸ್ಥಿತಿ ಗಂಭೀರವಾಗಿರುವ ಘಟನೆ ಲಕ್ನೋದಲ್ಲಿ ನಡೆದಿದೆ.
ಹಜರತ್ಗಂಜ್ ಪ್ರದೇಶದ ದಾಲಿಬಾಗ್ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳೀಯ ನಿವಾಸಿಗಳಾದ ಗಣೇಶ್ ಗುಪ್ತಾ ಮತ್ತು ರಾಣಾ ಪ್ರತಾಪ್ ಛೇದನದ ಬಳಿ ಹೋಟೆಲ್ ತೆರೆದಿದ್ದರು.
ಅವರು ತಡರಾತ್ರಿ ಗ್ರಾಹಕರಿಗೆ ಊಟ ಬಡಿಸುತ್ತಿದ್ದಾಗ ವೇಗವಾಗಿ ಬಂದ ಕಾರು ಮೊದಲು ಎರಡು ದ್ವಿಚಕ್ರ ವಾಹನಗಳಿಗೆ ನಂತರ ರಿಕ್ಷಾ ಚಾಲಕನಿಗೆ ಡಿಕ್ಕಿ ಹೊಡೆದಿದೆ. ಕೊನೆಗೆ ಶೌಚಾಲಯದ ಗೋಡೆಗೆ ಡಿಕ್ಕಿ ಹೊಡೆದು ನಿಂತಿದೆ. ಕೂಡಲೇ ಸ್ಥಳದಲ್ಲಿದ್ದ ಜನರ ಗುಂಪು ಕಾರಿನಲ್ಲಿದ್ದವರಿಗೆ ಥಳಿಸಿದೆ ಎನ್ನಲಾಗಿದೆ.
Advertisement. Scroll to continue reading.
ಸ್ಥಳೀಯರ ಕರೆಯ ಮೇರೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಚಾಲಕರಾದ ಫಾರೂಕ್ ಮತ್ತು ಅಕ್ಷಯ್ ಅವರನ್ನು ವಶಕ್ಕೆ ಪಡೆದಿದ್ದಾರೆ.
ಇದರಲ್ಲಿ ಓರ್ವ ಗಂಭೀರವಾಗಿ ಗಾಯಗೊಂಡಿದ್ದು, ಹಲವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
Advertisement. Scroll to continue reading.