ಹಿರಿಯಡಕ : ಮುತ್ತೂರು ಶ್ರೀಬಬ್ಬುಸ್ವಾಮಿ ಮತ್ತು ಪರಿವಾರ ದೈವಗಳ ದೈವಸ್ಥಾನದ ಪುನರ್ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ದೈವಗಳ ದರ್ಶನ ಸೇವೆ
Published
2
ಹಿರಿಯಡಕ : ಹಿಂದೂ ಧರ್ಮಕ್ಕೆ ಇತಿಹಾಸವಿದೆ. ಆದರೆ, ಇತ್ತೀಚೆಗೆ ತುಳಿತಕ್ಕೊಳಗಾಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಅದಕ್ಕಾಗಿ ಇಂತಹ ಧಾರ್ಮಿಕ ಕಾರ್ಯಕ್ರಮಗಳು ನಡೆಯಬೇಕು. ಧಾರ್ಮಿಕ ಕಾರ್ಯಗಳು ಊರಿಗೆ ಹಬ್ಬದಂತೆ. ಊರವರ ಕರಸೇವೆಗೆ ಅವಕಾಶ ಸಿಗುತ್ತದೆ. ಇಂತಹ ಕೆಲಸಗಳು ನಡೆಯಬೇಕೆಂದರೆ ಸಮಾನ ಮನಸ್ಥಿತಿಗಳು ಇರಬೇಕು ಎಂದು ಕೊಡಿಬೆಟ್ಟು ಗ್ರಾಪಂ ಉಪಾಧ್ಯಕ್ಷ ಸದಾನಂದ ಪ್ರಭು ಹೇಳಿದರು.
ಅವರು ಮುತ್ತೂರು ಶ್ರೀಬಬ್ಬುಸ್ವಾಮಿ ಮತ್ತು ಪರಿವಾರ ದೈವಗಳ ದೈವಸ್ಥಾನದ ಪುನರ್ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ದೈವಗಳ ದರ್ಶನ ಸೇವೆಯ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸಂದರ್ಭ ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿದ, ದೈವಸ್ಥಾನದ ಜೀರ್ಣೋದ್ಧಾರ ಕಾರ್ಯದಲ್ಲಿ ನೆರವು ನೀಡಿದ ಅರ್ಚಕ ವೃಂದದ ಭಾಸ್ಕರ ಮುತ್ತೂರು ಅವರನ್ನು ಸನ್ಮಾನಿಸಲಾಯಿತು.
ಶ್ರೀಬಬ್ಬುಸ್ವಾಮಿ ದೈವಸ್ಥಾನದ ಆಡಳಿತ ಮೊಕ್ತೇಸರ ಮೋಹನದಾಸ ಹೆಗ್ಡೆ ಮುತ್ತೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಹರಿಬೆಟ್ಟು ಶ್ರೀನಿವಾಸ ಮಠದ ಶಶಿಧರ ಗುರ್ಜರ್, ಕೊಡಿಬೆಟ್ಟು ಗ್ರಾಪಂ ಅಧ್ಯಕ್ಷೆ ಆಶಾ ಡಿ.ಶೆಟ್ಟಿ, ಸಂಜೀವ್ ಶೆಟ್ಟಿ ಮುತ್ತೂರು ಉಪಸ್ಥಿತರಿದ್ದರು.