ಕುಂದಾಪುರ : ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ಲಯನ್ಸ್ ಕ್ಲಬ್ ಹಂಗಳೂರು ವತಿಯಿಂದ ಕುಂದಾಪುರದ ಬಸ್ರೂರು ಮೂರುಕೈ ಬಳಿ ನಿರ್ಮಾಣಗೊಂಡ ಹೊಸ ಬಸ್ ನಿಲ್ದಾಣದ ಲೋಕಾರ್ಪಣೆ ಕಾರ್‍ಯಕ್ರಮ ಶನಿವಾರ ಸಂಜೆ ನಡೆಯಿತು.
ಸುಸಜ್ಜಿತ ಬಸ್ ನಿಲ್ದಾಣ ಉದ್ಘಾಟಿಸಿದ ಲಯನ್ಸ್ ಕ್ಲಬ್ ಜಿಲ್ಲಾ ಗವರ್ನರ್ ವಿಶ್ವನಾಥ ಶೆಟ್ಟಿ ಮಾತನಾಡಿ, ಇಂತಹ ಸಮಾಜಮುಖಿ ಕೆಲಸವನ್ನು ಹಂಗಳೂರು ಕ್ಲಬ್‌ನಿಂದ ನಿರಂತರವಾಗಿ ನಡೆಯುತ್ತಿರುವುದು ಖುಷಿಯ ಸಂಗತಿ. ಹತ್ತಾರು ಕೊಡುಗೆಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದೆ. ಇದು ಈ ಭಾಗಕ್ಕೆ ಒಳ್ಳೆಯ ಕೊಡುಗೆಯಾಗಿದೆ ಎಂದರು.
ಈ ಜಾಗದಲ್ಲಿ ಮಾಡಲು ಬಹಳಷ್ಟು ಸವಾಲು ಎದುರಾಗಿತ್ತು. ಅಡಚಣೆಗಳ ಮಧ್ಯೆಯೂ ಉತ್ತಮ ನಿಲ್ದಾಣವನ್ನು ನಿರ್ಮಿಸಿರುವುದು ಹರ್ಷ ತಂದಿದೆ ಎಂದು ಲಯನ್ಸ್ ಕ್ಲಬ್ ಹಂಗಳೂರಿನ ಬೆಳ್ಳಿ ಹಬ್ಬ ಆಚರಣಾ ಸಮಿತಿಯ ಸಂಚಾಲಕ ಎಚ್. ಬಾಲಕೃಷ್ಣ ಶೆಟ್ಟಿ ಹೇಳಿದರು.
Advertisement. Scroll to continue reading.
ಮೊದಲ ಉಪ ಗವರ್ನರ್ ಡಾ| ನೆರ್ರಿ ಕರ್ನೆಲಿಯೋ, ಸೆಕೆಂಡ್ ಉಪ ಗವರ್ನರ್ ಮಹಮ್ಮದ್ ಹನೀಫ್, ಹಿಂದಿನ ಜಿಲ್ಲಾ ಗವರ್ನರ್ ಡಾ| ಕೆ. ಮಧುಸೂಧನ್ ಹೆಗ್ಡೆ, ಲಯನ್ಸ್ ಕ್ಲಬ್ ಹಂಗಳೂರಿನ ಅಧ್ಯಕ್ಷ ಮ್ಯಾಥ್ಯೂ ಜೋಸೆಫ್, ಕಾರ್‍ಯದರ್ಶಿ ವಿಲ್ರೆಡ್ ಮಿನೇಜಸ್, ಎಲ್ಲ ಸದಸ್ಯರು, ಕುಂದಾಪುರದ ನಗರ ಯೋಜನಾ ಪ್ರಾಕಾರದ ಅಧ್ಯಕ್ಷ ವಿಜಯ ಎಸ್. ಪೂಜಾರಿ, ಮಾಜಿ ಅಧ್ಯಕ್ಷ ವಿಕಾಸ ಹೆಗ್ಡೆ, ಪುರಸಭೆ ಸದಸ್ಯರಾದ ಶೇಖರ್ ಪೂಜಾರಿ, ಪ್ರಭಾಕರ್,ಲಯನ್ಸ್ ಪ್ರಮುಖರಾದ ಶೇಖರ್ ಶೆಟ್ಟಿ, ಝೋನ್ ಚೇರ್ಮನ್ ಬನ್ನಾಡಿ ಸೋಮನಾಥ ಹೆಗ್ಡೆ ಇತರೆ ಕ್ಲಬ್‌ನ ಪದಾದಿಕಾರಿಗಳು ಉಪಸ್ಥಿತರಿದ್ದರು.