ಸಿನಿಮಾ

ಬಂಗಾಳಿ ಕಿರುತೆರೆ ನಟಿ ಪಲ್ಲವಿ ಡೇ ಆತ್ಮಹತ್ಯೆ!

1

ಬಂಗಾಳಿ ನಟಿ ಪಲ್ಲವಿ ಡೇ ಕೋಲ್ಕತ್ತಾದ ಗರ್ಫಾ ಪ್ರದೇಶದಲ್ಲಿರುವ ತನ್ನ ಫ್ಲ್ಯಾಟ್ ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಆತ್ಮಹತ್ಯೆ ಎಂದು ಶಂಕೆ ವ್ಯಕ್ತವಾಗಿದೆ.

ಪಲ್ಲವಿ ಅವರ ದೇಹವು ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಾಥಮಿಕ ತನಿಖೆಯ ನಂತರ ಇದು ಆತ್ಮಹತ್ಯೆ ಪ್ರಕರಣವೆಂದು ತೋರುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

20 ವರ್ಷ ವಯಸ್ಸಿನ ಪಲ್ಲವಿ ‘ಮೋನ್ ಮಾನೆ ನಾ’ ಧಾರವಾಹಿಯಲ್ಲಿ ಗೌರಿಯಾಗಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿ ಹೆಸರುವಾಸಿಯಾಗಿದ್ದರು. ಅವರು ರೇಶಮ್ ಜಾಪಿ, ಸರಸ್ವತಿ ಪ್ರೇಮ್ ಮತ್ತು ಅಮಿ ಸಿರಾಜೆರ್ ಬೇಗಂ ಧಾರಾವಾಹಿಗಳ ಮೂಲಕ ಮನೆ ಮಾತಾಗಿದ್ದಾರು.

Advertisement. Scroll to continue reading.

ಪಲ್ಲವಿ ನಿಧನಕ್ಕೆ ಅನೇಕ ಕಲಾವಿದರು, ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com