ಬ್ರಹ್ಮಾವರ: ರೈಲ್ವೇ ಹಳಿ ದಾಟುತ್ತಿದ್ದ ವೇಳೆ ರೈಲು ಡಿಕ್ಕಿ ಹೊಡೆದು ವ್ಯಕ್ತಿ ಮೃತಪಟ್ಟಿರುವ ಘಟನೆ ಭಾನುವಾರ ಸಂಜೆ ಚಾಂತಾರಿನಲ್ಲಿ ನಡೆದಿದೆ.
ಹೇರೂರು ಗ್ರಾಮದ ಸೋಮ ನಾಯ್ಕ(55) ಮೃತ ದುರ್ದೈವಿ.
ಬೆಳಿಗ್ಗೆ ಕೆಲಸಕ್ಕೆ ಹೋಗಿದ್ದ ಅವರು ಚಾಂತಾರು ರೈಲು ಹಳಿ ಬಳಿ ಇರುವ ತಮ್ಮ ದೈವದ ಮನೆಗೆ ಹೋಗಲು ರೈಲ್ವೇ ಟ್ರಾಕ್ ನ್ನು ದಾಟುವಾಗ ಸಂಜೆ 4:10 ಗಂಟೆಗೆ ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಹಾದು ಹೋಗುವ ಮತ್ಸ್ಯಗಂಧ ಎಕ್ಸ್‌ಪ್ರೆಸ್ ರೈಲು ಡಿಕ್ಕಿಯಾಗಿದೆ. ಪರಿಣಾಮ ಕೆಲವು ದೂರ ಎಸೆಯಲ್ಪಟ್ಟು ತೀವ್ರ ಗಾಯಗೊಂಡು ಸ್ಥಳದಲ್ಲೇ ಅವರು ಮೃತಪಟ್ಟಿದ್ದಾರೆ.
Advertisement. Scroll to continue reading.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.