ಚಂದನವನ : ಈಗಾಗಲೇ 777 ಚಾರ್ಲಿ ಚಿತ್ರ ಕುತೂಹಲ ಹೆಚ್ಚಿಸಿದೆ. ಇದೀಗ ಮತ್ತಷ್ಟು ನಿರೀಕ್ಷೆ ಹೆಚ್ಚಿಸುವಲ್ಲಿ ಟ್ರೇಲರ್ ಸಫಲವಾಗಿದೆ. ಹೌದು, ಇಂದು ಚಾರ್ಲಿ 777 ಚಿತ್ರದ ಟ್ರೇಲರ್ ಬಿಡುಗಡೆಗೊಂಡಿದೆ. ಅಂದುಕೊಂಡಂತೆ ಸಕತ್ತಾಗೇ ಇದೆ.
ನಾಯಿ ಹಾಗೂ ಮನುಷ್ಯನ ಬಾಂಧವ್ಯದ ಕಥೆ ಸಾರುವ ‘ ಚಾರ್ಲಿ 777’ ಟ್ರೇಲರ್ ನಲ್ಲಿ ತಮಾಷೆ ಜೊತೆಗೆ ಭಾವನಾತ್ಮಕ ಅಂಶಗಳನ್ನು ಒಳಗೊಂಡಿದೆ. ಹಾಗಾಗಿ ಈ ಚಿತ್ರ ಎಮೋಷನಲ್ ಕಥೆ ಹೊಂದಿದೆ ಎಂಬುದು ಪಕ್ಕಾ ಆಗಿದೆ.
ಕಿರಣ್ ರಾಜ್ ನಿರ್ದೇಶನದ ಈ ಚಿತ್ರದಲ್ಲಿ ಸಂಗೀತಾ ಶೃಂಗೇರಿ ನಾಯಕಿ. ಚಾರ್ಲಿ, ರಾಜ್.ಬಿ.ಶೆಟ್ಟಿ, ಅಚ್ಯುತ್, ದಾನೀಶ್ ಸೇಠ್ ಮೊದಲಾದವರು ಪಾತ್ರವಾಗಿದ್ದಾರೆ.
Advertisement. Scroll to continue reading.
ಜಿ.ಎಸ್.ಗುಪ್ತಾ ಮತ್ತು ರಕ್ಷಿತ್ ಶೆಟ್ಟಿ ಬಂಡವಾಳ ಹೂಡಿದ್ದು, ನೊಬಿನ್ ಪೌಲ್ ಸಂಗೀತ ಸಂಯೋಜಿಸಿದ್ದಾರೆ. ಅರವಿಂದ್ ಎಸ್.ಕಶ್ಯಪ್ ಛಾಯಾಗ್ರಹಣ, ಪ್ರತೀಕ್ ಶೆಟ್ಟಿ ಸಂಕಲನ ಚಿತ್ರಕ್ಕಿದೆ.
ಚಿತ್ರಕ್ಕೆ ಅನೇಕ ಬಹುಭಾಷಾ ಸ್ಟಾರ್ಸ್ ಪ್ರೋತ್ಸಾಹ ನೀಡುತ್ತಿದ್ದು, ಟ್ರೇಲರ್ ಮೆಚ್ಚಿಕೊಂಡಿದ್ದಾರೆ. ಅಭಿಮಾನಿಗಳು ಚಾರ್ಲಿ ಮತ್ತು ಧರ್ಮನ ಪಯಣಕ್ಕೆ ಶುಭಹಾರೈಸುತ್ತಿದ್ದಾರೆ. ಅಂದ್ಹಾಗೆ ಚಾರ್ಲಿ 777 ಚಿತ್ರ ಜೂನ್ 10 ರಂದು ತೆರೆಗೆ ಬರಲಿದೆ.
Advertisement. Scroll to continue reading.