ಶಿವಮೊಗ್ಗ: ಎಂಜಿನಿಯರಿಂಗ್ ಕಾಲೇಜೊಂದರಲ್ಲಿನ ವಿದ್ಯಾರ್ಥಿಯೊಬ್ಬ, ಹಾಸ್ಟೆಲ್ ನಲ್ಲಿಯೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರೋ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಕಲಬುರ್ಗಿ ಮೂಲದ ಸಂದೀಪ್ ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿ.
ಶಿವಮೊಗ್ಗದ ಜೆಎನ್‌ಎನ್ ಎಂಜಿನಿಯರಿಂಗ್ ಕಾಲೇಜಿನ ಹಾಸ್ಟೆಲ್ ನಲ್ಲಿ, ಇಂದು ಸಂದೀಪ್ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
Advertisement. Scroll to continue reading.
ಮೃತ ಸಂದೀಪ್ ಜೆಎನ್‌ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ ವಿಭಾಗದ ಎಂಜಿನಿಯರಿಂಗ್ ನಲ್ಲಿ ಮೂರನೇ ಸೆಮಿಸ್ಟರ್ ಓದುತ್ತಿದ್ದನು. ಮೂರು ನಾಲ್ಕು ದಿನಗಳ ಹಿಂದಷ್ಟೇ ಪರೀಕ್ಷೆ ಮುಗಿಸದಿತ್ತು. ಸಂದೀಪ್ ಸ್ನೇಹಿತರೆಲ್ಲರೂ ಊರಿಗೆ ಹೋಗಿದ್ದರು, ಈತ ಮಾತ್ರ ಹಾಸ್ಟೆಲ್ ನಲ್ಲಿಯೇ ಉಳಿದಿದ್ದ ಎನ್ನಲಾಗಿದೆ.
ಇಂದು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಸಂದೀಪ್ ಹಾಸ್ಟೆಲ್ ಕೊಠಡಿಯಿಂದ ಹೊರಗೆ ಬಾರದ ಕಾರಣ, ಸ್ನೇಹಿತರು ಬಾಗಿಲು ಬಡಿದು ನೋಡಿದ್ದಾರೆ. ಆದರೆ ಬಾಗಿಲು ತೆಗೆಯದೇ ಇದ್ದಾಗ, ಕಿಟಕಿಯಿಂದ ನೋಡಿದಾಗ ಸಂದೀಪ್ ಹಾಸ್ಟೆಲ್ ಕೊಠಡಿಯಲ್ಲಿನ ಫ್ಯಾನ್ ಗೆ ನೇಣುಬಿಗಿದುಕೊಂಡಿರುವುದು ಬೆಳಕಿಗೆ ಬಂದಿದೆ.
ಈ ಸಂಬಂಧ ವಿನೋಬ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement. Scroll to continue reading.