ಹಿರಿಯಡಕ : ಶಾಲಾ ಪ್ರಾರಂಭೋತ್ಸವ; ಸ.ಹಿ.ಪ್ರಾ. ಶಾಲೆ ಕಾಜಾರಗುತ್ತಿನಲ್ಲಿ ಮಕ್ಕಳಿಗೆ ಸಂಭ್ರಮದ ಸ್ವಾಗತ
Published
4
ಹಿರಿಯಡಕ : ಇಂದು ಶಾಲಾ ಪ್ರಾರಂಭೋತ್ಸವ. ಸ.ಹಿ.ಪ್ರಾ. ಶಾಲೆ ಕಾಜಾರಗುತ್ತಿನಲ್ಲಿ ಮಕ್ಕಳನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು. ಶಾಲೆಯನ್ನು ತೋರಣ, ಬಲೂನುಗಳನ್ನು ಕಟ್ಟಿ ಸಿಂಗರಿಸಲಾಗಿತ್ತು. ಮಕ್ಕಳಿಗೆ ಬಲೂನು ನೀಡಿ ಸ್ವಾಗತಿಸಲಾಯಿತು.
ನಮ್ಮ ಶಾಲೆ ನಮ್ಮ ಹೆಮ್ಮೆ ಅಭಿಯಾನದ ಅಡಿ ಶಾಲೆ ಉಳಿಸುವ ಸಲುವಾಗಿ ಆಂಗ್ಲ ಮಾದ್ಯಮ ಶಿಕ್ಷಣವನ್ನು ಆರಂಭಿಸಲಾಗಿದ್ದು ಕನ್ನಡ, ಮತ್ತು ಆಂಗ್ಲ ಮಾದ್ಯಮ ಶಾಲೆಯಲ್ಲಿ ಒಟ್ಟು 150 ಕ್ಕೂ ಅಧಿಕ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಇಂದು ಕೂಡ ಶಾಲೆಯಲ್ಲಿ ದಾಖಲಾತಿ ಭರದಿಂದ ನಡೆಯಿತು.