ಎರಡು ದಿನಗಳ ಓರ್ಥೋ ಡೋಕ್ಸ್ ಸಿರಿಯನ್ ಇಗರ್ಜಿಯಾದ ಸಾಸ್ತಾನ ಸೈಂಟ್ ಥೋಮಸ್ ಇಗರ್ಜಿ ಪವಿತ್ರೀಕರಣ, ಉದ್ಘಾಟನೆ ಸಂಭ್ರಮ ವೀಕ್ಷಿಸಿದ ಪಾರಿವಾಳ
Published
0
ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಹಿಂದೂ ಧರ್ಮದಲ್ಲಿ ದೇವಸ್ಥಾನಗಳ ಜೀಣೋದ್ಧಾರ ಪುನರ್ ಪ್ರತಿಷ್ಠೆ ನಡೆಯುವಾಗ ದೇವರ ಸ್ವರೂಪವಾಗಿ ಗರುಡ ಆಭಾಗದಲ್ಲಿ ಸಂಚರಿಸುವು ದೇವರ ಸಂತೃಪ್ತಿಗೊಂಡಿದ್ದಾನೆ ಎನ್ನುವುದು ವಾಡಿಕೆ.
ಅದೇ ರೀತಿಯಲ್ಲಿ ಕ್ರೈಸ್ತ ಧರ್ಮದವರಿಗೆ ಪಕ್ಷಿಯಲ್ಲಿ ಪಾರಿವಾಳ ಶ್ರೇಷ್ಠ ಎನ್ನುತ್ತಾರೆ ಮತ್ತು ರೋಮ್ ಸೇರಿದಂತೆ ಪ್ರತೀ ಚರ್ಚಿನಲ್ಲಿ ಪಾರಿವಾಳಗಳ ಚಿತ್ರವನ್ನು ರಚಿಸುತ್ತಾರೆ. ಭಾರತದ ಪ್ರಾಚೀನ ಪರಂಪರೆಯ ಓರ್ಥೋ ಡೋಕ್ಸ್ ಸಿರಿಯನ್ ಇಗರ್ಜಿಯಾದ ಸಾಸ್ತಾನ ಸೈಂಟ್ ಥೋಮಸ್ ಇಗರ್ಜಿ 100 ವರ್ಷದಿಂದ ಇದ್ದು ತೀರಾ ಶಿಥಿಲವಾಗಿರುವುದನ್ನು ಇಲ್ಲಿನ ಜನರು ನವೀಕೃತಗೊಳಿಸಿ ಮೇ 17 ಮತ್ತು 18 ರಂದು ಧಾರ್ಮಿಕ ಗುರುಗಳಿಂದ ಪವಿತ್ರೀಕರಣ ಮತ್ತು ಉದ್ಘಾಟನಾ ಕಾರ್ಯಕ್ರಮ ಧಾರ್ಮಿಕ ಕಾರ್ಯಕ್ರಮಗಳು ಜರುಗಿತ್ತು.
Advertisement. Scroll to continue reading.
ಇಲ್ಲಿನ ಕೆಲವೇ ಕ್ರ್ರೈಸ್ತ ಮನೆಗಳ ಜನರು ಕೊರೋನಾ ಮತ್ತು ಲಾಕ್ ಡೌನ್ ಹಿನ್ನೆಲೆಯಲ್ಲಿ ಕೂಡಾ 3 ವರ್ಷದಿಂದ ಹಗಲು ಇರುಳು ಎನ್ನದೆ ತಮ್ಮ ತನು ಮನ ಧನ ಶ್ರಮವನ್ನು ಇಲ್ಲಿ ವಿನಿಯೋಗ ಮಾಡಿ ಸುಂದರ ಶಾಸ್ತ್ರ ಸಮ್ಮತವಾಗಿ ದೇವರ ಮಂದಿರವನ್ನು ನಿರ್ಮಿಸಿ ಸಾಕಾರಗೊಳಿಸಿದ್ದಾರೆ.
ಮೋಸೆಸ್ ರೋಡ್ರಿಗಸ್
ಪವಾಡ ಎಂದರೆ ಇಲ್ಲಿನ ಜೀಣೋದ್ಧಾರದ ಅಧ್ಯಕ್ಷ ಮೋಸೆಸ್ ರೋಡ್ರಿಗಸ್ ಕಳೆದ 3 ದಿನದ ಹಿಂದೆ ಮಾದ್ಯಮದೊಂದಿಗೆ ಮಾತನಾಡಿ ತುಂಬಾ ಕಷ್ಟ ಪಟ್ಟು ನಾವುಗಳು ದೊಡ್ಡ ಯೋಜನೆಗೆ ಕೈ ಹಾಕಿದ್ದೇವೆ. ಆದರೆ ಅದನ್ನು ಮುಕ್ತಾಯಗೊಳಿಸಿ ಉದ್ಘಾಟನೆ ಮಾಡುವುದು ತೀರಾ ಕಷ್ಟ ಎಂದು ಆಲೋಚಿಸುವಾಗ ಅರ್ಧ ಕೆಲಸ ಆದ ಚರ್ಚ್‌ನ ಒಳಗಡೆ ಅನೇಕ ಬಾರಿ ಪಾರಿವಾಳವೊಂದು ಬಂದು ಹೋಗುತ್ತಿತ್ತು ಎಂದಿದ್ದರು.
ಕಳೆದ 2 ದಿನದಿಂದ ವರದಿಗೆ ಹೋದ ನನಗೆ ಅದೇಕೋ ದೇವಾಲಯದ ಶಿಖರ ಎನ್ನುವ ಭಾಗವಾದ ಚರ್ಚ್‍ನ ಮುಖ್ಯ ಗೋಪುರದ ಮೇಲಿರುವ ಶಿಲುಬೆಯಲ್ಲಿ ಪಾರಿವಾಳ ವೊಂದು ಕುಳಿತಿರುವುದು ಕಂಡು ಬಂತು.
ಇಂದು ಬುಧವಾರ ಕೂಡಾ ಅದು ಶಿಲುಬೆಯ ಮೇಲೆ ಕುಳಿತು ಸಾವಿರಾರು ಮಂದಿ ಭಕ್ತರು ಆಗಮಿಸಿ ಪ್ರಾರ್ಥಿಸುವ ಮತ್ತು ಸಂಭ್ರಮಿಸುವುದನ್ನು ಕಂಡು ಪವಾಡ ಎನ್ನುವುದನ್ನು ಖಚಿತ ಪಡಿಸಿಕೊಂಡೆ.
ಧರ್ಮ ದೇವರು ಯಾವೂದೆ ಆಗಲಿ ಸಾಮೂಹಿಕ ವಾಗಿ ಪ್ರಾರ್ಥಿಸುವ ಭಜಿಸುವ ಶೃದ್ಧಾಕೇಂದ್ರ ದಲ್ಲಿ ಅವರವರ ಭಾವಕ್ಕೆ ಅವರರವರ ಭಕುತಿಗೆ ತಕ್ಕಂತೆ ದೇವರು ಮತ್ತು ನಂಬಿಕೆಗಳು ನಡೆಯುತ್ತಲೆ ಇರುತ್ತದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ.
ಮಲಂಕರ ಓರ್ಥೋ ಡೋಕ್ಸ್ ಸಿರಿಯನ್ ಸಭೆಯ ಪರಮಾಧ್ಯಕ್ಷರಾದ ಪರಮ ಪೂಜ್ಯ ಬಸಲಿಯೋಸ್ ಮಾರ್ಥೋಮ ಮ್ಯಾಥ್ಯೂಸ್ ತೃತೀಯ, ಕೊಚ್ಚಿ ಧರ್ಮ ಪ್ರಾಂತ್ಯ ಧರ್ಮಾಧ್ಯಕ್ಷ ಯಾಕೋಬ್ ಮಾರ್ ಐರೇನಿಯಸ್ ,ಅಹಮ್ಮದಾಬಾದ್ ಧರ್ಮಪ್ರಾತ್ಯದ ಧರ್ಮಾಧ್ಯಕ್ಷ ಗೀವರ್ಗೀಸ್ ಮಾರ್ ಯುಲಿಯೋಸ್ , ಬ್ರಹ್ಮಾವರ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ವಂದನೀಯ ಯಾಕೋಬ್ ಮಾರ್ ಏಲಿಯಾಸ್ ಇನ್ನಿತರರು ಉಪಸ್ಥಿತರಿದ್ದರು.
ಇಂದು ಕಾರ್ಯಕ್ರಮದ ಬಳಿಕ ಪ್ರಾರ್ಥನೆ ಬಳಿಕ ಧರ್ಮಗುರುಗಳನ್ನು ದಾನಿಗಳನ್ನು ಮತ್ತು ಆಡಳಿತ ಮಂಡಳಿಯವರನ್ನು ನವೀಕರಣ ಸಮಿತಿಯವರನ್ನು ಸನ್ಮಾನಿಸಲಾಯಿತು.
ಸಹಸ್ರಾರು ಮಂದಿ ಊಟ ಉಪಹಾರ ಸೇರುವ ಒಂದೆಡೆಯಲ್ಲಿ ತುರ್ತು ಸಂದರ್ಬಕ್ಕೆ ಅಗ್ನಿಶಾಮಕ ದಳ , ತುರ್ತು ಆರೋಗ್ಯ ಸೇವೆ ಘಟಕ, ಅಂಬೂಲೆನ್ಸ್ ಇದೆಲ್ಲವೂ 2 ದಿನದಿಂದ ಚರ್ಚ್ ಬಳಿ ಠಿಕಾಣಿ ಹೂಡಿತ್ತು.