ಬೆಂಗಳೂರು : 8 ಲಕ್ಷ 83 ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 7,30,8881 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಬಾರಿ 85.63 ಶೇ. ಫಲಿತಾಂಶ ಬಂದಿದೆ. ಇದು ಕಳೆದ ಹತ್ತು ವರ್ಷದಲ್ಲೇ ದಾಖಲೆಯ ಫಲಿತಾಂಶ. ಈ ಬಾರಿಯೂ ಬಾಲಕಿಯರದೇ ಮೇಲು ಗೈ ಎಂದು ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.
3,72,279 ಬಾಲಕಿಯರು, 3,58, 602 ಬಾಲಕರು ಉತ್ತೀರ್ಣರಾಗಿದ್ದಾರೆ. 40,061 ವಿದ್ಯಾರ್ಥಿಗಳು ಗ್ರೇಸ್ ಮಾರ್ಕ್ಸ್ ಪಡೆದು ಪಾಸ್ ಆಗಿದ್ದಾರೆ.
ಯಾವ ಜಿಲ್ಲೆ ಮೊದಲು ಯಾವ ಜಿಲ್ಲೆ ಲಾಸ್ಟ್ ಎನ್ನುವ ವಿಂಗಡಣೆ ಇಲ್ಲ. ಶಾಲೆಗಳಿಗೆ ಗ್ರೇಡ್ ವೈಸ್ ಫಲಿತಾಂಶದ ವಿವರವನ್ನು ನೀಡಲಾಗಿದೆ. 32 ಜಿಲ್ಲೆಗಳು ಎ ಗ್ರೇಡ್ ಪಡೆದಿವೆ.
Advertisement. Scroll to continue reading.
ಬೆಂಗಳೂರು ದಕ್ಷಿಣ, ಯಾದಗಿರಿ ‘ಬಿ’ ಗ್ರೇಡ್ ಪಡೆದಿದೆ.
145 ವಿದ್ಯಾರ್ಥಿಗಳಿಗೆ 625 ಕ್ಕೆ 625 ಅಂಕ ಬಂದಿದೆ. 309 ವಿದ್ಯಾರ್ಥಿಗಳಿಗೆ 624 ಅಂಕ ಪಡೆದಿದ್ದಾರೆ. ಸರ್ಕಾರಿ ಶಾಲೆ 88.8% ಫಲಿತಾಂಶ ಪಡೆದಿದ್ದು, ಅನುದಾನಿತ ಶಾಲೆಗಳು 87.84 % ಫಲಿತಾಂಶ ಪಡೆದಿವೆ. ಒಟ್ಟು 20 ಶಾಲೆಗಳಿಗೆ ಶೂನ್ಯ ಫಲಿತಾಂಶ ಬಂದಿದೆ.
ಪೂರಕ ಪರೀಕ್ಷೆ : ಮೇ 27 ರಿಂದ ಆರಂಭಗೊಳ್ಳಲಿದ್ದು, ಜೂನ್ 4 ಕ್ಕೆ ಮುಗಿಯಲಿದೆ. ಮೇ 20 ರಿಂದ 30 ರ ವರೆಗೆ ಆನ್ಲೈನ್ ಮೂಲಕ ಪೂರಕ ಪರೀಕ್ಷೆಗೆ ನೋಂದಾಯಿಸಲು ಅವಕಾಶ ಇದೆ.
ಮರು ಮೌಲ್ಯಮಾಪನ : ಮರು ಮೌಲ್ಯಮಾಪನ ಸಲ್ಲಿಸುವ ವಿದ್ಯಾರ್ಥಿಗಳಿಗೆ ಆನ್ಲೈನ್ ನಲ್ಲಿ ಅವಕಾಶ ಇದೆ ಎಂದು ತಿಳಿಸಿದ್ದಾರೆ.
Advertisement. Scroll to continue reading.
ಫಲಿತಾಂಶ ವೀಕ್ಷಿಸಲು ಕ್ರಮ :
- ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಫಲಿತಾಂಶ ಘೋಷಣೆಯಾದ ನಂತ್ರ, karresults.nic.in ಮತ್ತು sslc.karnataka.gov.in ಜಾಲತಾಣಕ್ಕೆ ಭೇಟಿ ನೀಡಬೇಕು.
- ಈ ಪುಟದಲ್ಲಿ ತೋರಿಸುವಂತ ಎಸ್ ಎಸ್ ಎಲ್ ಸಿ ಫಲಿತಾಂಶ ವೀಕ್ಷಣೆಯ ಲಿಂಕ್ ಕ್ಲಿಕ್ ಮಾಡಬೇಕು.
- ಆಗ ತೆರೆದುಕೊಳ್ಳುವಂತ ಮತ್ತೊಂದು ಪುಟದಲ್ಲಿ ನಿಮ್ಮ ನೋಂದಣಿ ಸಂಖ್ಯೆ ನಮೂದಿಸಬೇಕು.