ಚಂದನವನ : ಇತ್ತೀಚೆಗೆ ಚಿತ್ರರಂಗದ ಅನೇಕರು ನಿಧನರಾಗುತ್ತಿದ್ದಾರೆ. ನಿನ್ನೆಯಷ್ಟೇ ಚೇತನಾ ರಾಜ್ ನಿಧನರಾಗಿದ್ದರು. ಇಂದು ಹಿರಿಯ ನಟ ಕ್ಯಾಪ್ಟನ್ ಚಲಪತಿ ಚೌದ್ರಿ ನಿಧನರಾಗಿದ್ದಾರೆ.
ಅವರು ಇಂದು ರಾಯಚೂರಿನಲ್ಲಿ ನಿಧನರಾಗಿದ್ದು, ಅವರಿಗೆ 67 ವರ್ಷ ವಯಸ್ಸಾಗಿತ್ತು. ಕ್ಯಾಪ್ಟನ್ ಚಲಪತಿ ಚೌದ್ರಿ ಅವರು ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿ ಆಗದೆ ನಿಧನ ಹೊಂದಿದ್ದಾರೆ ಎಂದು ತಿಳಿದು ಬಂದಿದೆ.
ನಟ ಚಲಪತಿ ಚೌದ್ರಿಯವರು ಆಂಧ್ರದ ವಿಜಯವಾಡ ಮೂಲದ ಚೌದ್ರಿಯವರು. ರಾಯಚೂರಿಗೆ ಆಗಮಿಸಿ, ಮೊದಲ ಬಾರಿಗೆ ಕೇಬಲ್ ಆರಂಭಿಸಿದ್ದರು. ಈ ಬಳಿಕ ಕಿರುತೆರೆ, ಸಿನಿಮಾಗೆ ಪದಾರ್ಪಣೆ ಮಾಡಿದಂತ ಅವರು, ಕನ್ನಡ, ಹಿಂದಿ, ತೆಲುಗು ಸೇರಿದಂತೆ ವಿವಿಧ ಭಾಷೆಗಳಲ್ಲಿ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.
Advertisement. Scroll to continue reading.
ಪೋಷಕ ಪಾತ್ರಗಳಿಂದ ಕ್ಯಾಪ್ಟನ್ ಚಲಪತಿ ಚೌದ್ರಿ ಜನಪ್ರಿಯರಾಗಿದ್ದರು. ಧಾರವಾಹಿಗಳಲ್ಲೂ ನಟಿಸಿದ್ದಾರೆ.