ಬೈಕಾಡಿ ಸಸ್ಯಕ್ಷೇತ್ರದಲ್ಲಿ ನಾನಾ ಭಾಗದಲ್ಲಿ ಬೆಳೆಯಲು ಸಜ್ಜುಗೊಂಡು ನಿಂತಿವೆ ಸಸ್ಯಗಳು; ಜೂ.5 ರಿಂದ ವಿತರಣಾ ಕಾರ್ಯ ಆರಂಭ
Published
1
ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಬೈಕಾಡಿ ಸಸ್ಯಕ್ಷೇತ್ರದ 3 ಎಕ್ರೆ ಜಾಗದಲ್ಲಿ ಅರಣ್ಯ ಇಲಾಖೆ ವತಿಯಿಂದ 25 ಜಾತಿಯ 69 ಸಾವಿರ ಸಸ್ಯಗಳು ನಾನಾ ಭಾಗದಲ್ಲಿ ಬೆಳೆಯಲು ಸಜ್ಜುಗೊಂಡು ನಿಂತಿದೆ. ಬ್ರಹ್ಮಾವರ ರಾಷ್ಟ್ರೀಯ ಹೆದ್ದಾರಿ 66 ಬೈಕಾಡಿ ರಸ್ತೆಯಲ್ಲಿರುವ ಇಲ್ಲಿನ ಸಸ್ಯ ಕ್ಷೇತ್ರದಲ್ಲಿ ಶ್ರೀಗಂಧ, ಮಾವು, ಬೇವು, ನಾಗಲಿಂಗ ಪುಷ್ಪ ಹೆಬ್ಬೆಲಸು, ಹಲಸು, ನೇರಳೆ, ಮಾಗವಾನಿ, ಕಹಿಬೇವು, ಪುನರಪುಳಿ, ಕಿರಾಲ್ ಬೋಗಿ, ಡಾಲ್ ಚೀನಿ, ನೆಲ್ಲಿ, ಮೇ ಫ್ಲವರ್ ಸೇರಿದಂತೆ ಅನೇಕ ಜಾತಿಯ ಸಸ್ಯಗಳನ್ನು ಬೆಳೆಸಲಾಗುತ್ತದೆ.
ಜೂನ 5 ರ ಪರಿಸರ ದಿನಾಚರಣೆ ದಿನದಿಂದ ಸಸಿಗಳನ್ನು ವಿತರಿಸಲು ಆರಂಭವಾಗುತ್ತದೆ. ಭೂಮಿಯ ದಾಖಲೆ ನೀಡಿದವರಿಗೆ ಸಸಿಯೊಂದರ ರೂ 2 ಅಥವಾ 3 ರೂ. ನಲ್ಲಿ ನೀಡಲಾಗುತ್ತದೆ . ಕೃಷಿ ಅರಣ್ಯ ಪ್ರೋತ್ಸಾಹದಲ್ಲಿ ಇನ್ನೂ ಕೂಡಾ ಕಡಿಮೆಯಲ್ಲಿ ನೀಡಲಾಗುವುದು.
ಈ ವರ್ಷ ಮಳೆ ಬೇಗ ಬಂದು ಮಣ್ಣು ಮೃದುವಾದರೂ ಕೂಡಾ ಮೇಲಧಿಕಾರಿಗಳ ಅನುಮತಿ ನೀಡಿದ ಕೂಡಲೇ ಜೂನ 5 ರ ಬಳಿಕ ಸಸಿ ವಿತರಣೆ ಕಾರ್ಯ ಮಾಡಲಿದ್ದು ಇದರ ಸದುಪಯೋಗ ಪಡೆದುಕೊಳ್ಳ ಬಹುದು. ಹರೀಶ್ ಕೆ., ಉಪವಲಯ ಅರಣ್ಯಾಧಿಕಾರಿ, ಬ್ರಹ್ಮಾವರ
0 ಬ್ರಹ್ಮಾವರ : ರುಡ್ ಸೆಟ್ ಬ್ರಹ್ಮಾವರ ಮತ್ತು ಸ್ಮಾರ್ಟ್ ಕ್ರೀಯೇಶನ್ಸ್ ಎಜ್ಯುಕೇಶನ್ ಟ್ರಸ್ಟ್ ಹೈಕಾಡಿ ಸಂಸ್ಥೆಯ ಸಹಭಾಗಿತ್ವದಲ್ಲಿ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹೈಕಾಡಿಯಲ್ಲಿ ಮೇಣದಬತ್ತಿ ತಯಾರಿಕಾ ತರಬೇತಿ ಉದ್ಘಾಟನೆಗೊಂಡಿತು. ಆವರ್ಸೆ...