ಸಿನಿಮಾ

ಸಿನಿಮಾ ಚಿತ್ರೀಕರಣದ ವೇಳೆ ಅವಘಡ; ನಟ ವಿಜಯ್ ದೇವರಕೊಂಡ – ನಟಿ ಸಮಂತಾಗೆ ಗಾಯ

1

ಪಹಲ್ಗಾಮ್ : ದಕ್ಷಿಣ ಕಾಶ್ಮೀರದ ಪಹಲ್ಗಾಮ್ ಪ್ರದೇಶದಲ್ಲಿ ಸಿನಿಮಾದ ಸಾಹಸಮಯ ದೃಶ್ಯದ ಚಿತ್ರೀಕರಣ ಮಾಡ್ತಿದ್ದ ವೇಳೆ ಖ್ಯಾತ ನಟನಾದ ವಿಜಯ್ ದೇವರಕೊಂಡ ಹಾಗೂ ನಟಿ ಸಮಂತಾ ರುತ್ ಪ್ರಭು ಗಾಯಗೊಂಡಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಇಬ್ಬರು ಪಾರಾಗಿದ್ದಾರೆ. ಅವರು ಈಗ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.

ಖುಷಿ’ ಚಿತ್ರದಲ್ಲಿ ಸಮಂತಾ ಹಾಗೂ ವಿಜಯ್ ದೇವರಕೊಂಡ ಒಟ್ಟಿಗೆ ನಟನೆ ಮಾಡ್ತಿದ್ದು, ಕಾಶ್ಮೀರದ ವಿವಿಧ ಪ್ರದೇಶಗಳಲ್ಲಿ ಶೂಟಿಂಗ್ ನಡೆಯುತ್ತಿದೆ. ಜನಪ್ರಿಯ ಪ್ರವಾಸಿ ತಾಣವಾದ ಪಹಲ್ಗಾಮ್ ನಲ್ಲಿ ಚಿತ್ರೀಕರಣ ನಡೆಯುತ್ತಿತ್ತು.

ಸಾಹಸಮಯ ದೃಶ್ಯದಲ್ಲಿ ಶೂಟ್ ಮಾಡಲಾಗುತ್ತಿತ್ತು. ಈ ವೇಳೆ ಈ ಅವಘಡ ಸಂಭವಿಸಿದೆ.

Advertisement. Scroll to continue reading.

ಲಿಡ್ಡರ್ ನದಿಯ ಎರಡು ಬದಿಗಳಲ್ಲಿ ಕಟ್ಟಲಾಗಿದ್ದ ಹಗ್ಗದ ಮೇಲೆ ವಾಹನ ರೇಸ್ ಚಿತ್ರೀಕರಣ ಮಾಡಲಾಗುತ್ತಿತ್ತು. ಈ ವೇಳೆ ಕಾರು ನೀರಿನಲ್ಲಿ ಬಿದ್ದಿದ್ದು, ಇಬ್ಬರ ಬೆನ್ನಿಗೂ ಗಾಯಗಳಾಗಿವೆ.

ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರಿಂದ ಯಾವುದೇ ರೀತಿಯ ದೊಡ್ಡ ಅವಘಡ ಸಂಭವಿಸಿಲ್ಲ ಎನ್ನಲಾಗಿದೆ.

ಅಂದಹಾಗೆ  ಖುಷಿ ಚಿತ್ರ ಡಿಸೆಂಬರ್ 23ರಂದು ಬಿಡುಗಡೆಯಾಗಲಿದೆ. ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ರಿಲೀಸ್ ಆಗಲಿದೆ. ಚಿತ್ರದ ಹೆಚ್ಚಿನ ಚಿತ್ರೀಕರಣ ಕಾಶ್ಮೀರದ ಗುಲ್ಮಾರ್ಗ್ ಸೋನಾಮಾರ್ಗ್, ದಾಲ್ ಲೇಕ್ ಮತ್ತು ಪಹಲ್ಗಾಮ್ ನಲ್ಲಿ ನಡೆದಿದೆ.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com