ಬ್ರಹ್ಮಾವರ : ಬಾರಕೂರು ನೇಶನಲ್ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿಶೇಷ ಚೇತನ ವಿದ್ಯಾರ್ಥಿನಿ ಚೈತನ್ಯ ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣ; ಸನ್ಮಾನ
Published
0
ಬ್ರಹ್ಮಾವರ : ಬಾರಕೂರು ನೇಶನಲ್ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿಶೇಷ ಚೇತನ ವಿದ್ಯಾರ್ಥಿನಿ ಚೈತನ್ಯ ಇವರು 2021-22ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 591(94.56%) ಅಂಕಗಳನ್ನು ಪಡೆದು, ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.
ಬ್ರಹ್ಮಾವರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಬಿ. ಟಿ. ನಾಯ್ಕ, ಎಸ್ ಎಸ್ ಎಲ್ ಸಿ ನೋಡಲ್ ಅಧಿಕಾರಿ ರಾಘವ ಶೆಟ್ಟಿ, ಇಸಿಓ ಪ್ರಕಾಶ ಬಿ.ಬಿ, BIERT ಚಂದ್ರಶೇಖರ ಶೆಟ್ಟಿ ಅವರು ಮನೆಗೆ ಭೇಟಿ ನೀಡಿ ಚೈತನ್ಯ ಸನ್ಮಾನಿಸಿದರು.
ಸಿ ಆರ್ ಪಿ ಪುಷ್ಪಾವತಿ, ಶಾಲಾ ಹಿರಿಯ ಶಿಕ್ಷಕಿ ಹೇಮಾವತಿ ಪಿ.ಯಸ್, ಸಹ ಶಿಕ್ಷಕಿ ಜ್ಯೋತಿ ಎ ಶೆಟ್ಟಿ ಅವರು ಉಪಸ್ಥಿತರಿದ್ದರು.
Advertisement. Scroll to continue reading.
ಚೈತನ್ಯ ಅವರು ನಡೆಯಲು ಮತ್ತು ಬರೆಯಲು ಅಸಮರ್ಥರಾಗಿದ್ದು, 9ನೇ ತರಗತಿಯ ವಿದ್ಯಾರ್ಥಿನಿ ಭೂಮಿಕ ಇವರ ಸಹಾಯದೊಂದಿಗೆ ಪರೀಕ್ಷೆ ಎದುರಿಸಿದ್ದರು. ಶಿಕ್ಷಕರು ಮತ್ತು ಪೋಷಕರ ಪ್ರೋತ್ಸಾಹದಿಂದ ಉತ್ತಮ ಅಂಕಗಳನ್ನು ಪಡೆಯಲು ಯಶಸ್ವಿಯಾಗಿದ್ದಾರೆ.
ಇವರು ಬಾರಕೂರು ರಂಗನಕೆರೆಯ ನಿವಾಸಿ ಶ್ರೀ ಜಯ ಶೆಟ್ಟಿಗಾರ್ ಮತ್ತು ಶ್ರೀಮತಿ ಪದ್ಮಿನಿ ಶೆಟ್ಟಿಗಾರ್ ಅವರ ಸುಪುತ್ರಿ.