ಮಂಗಳೂರು : ಮಂಗಳೂರಿನ ಮಳಲಿ ಬಳಿ ಮಸೀದಿ ನವೀಕರಣ ವೇಳೆ ದೇವಸ್ಥಾನ ಪತ್ತೆ ವಿಚಾರಕ್ಕೆ ಸಂಬಂಧಪಟ್ಟಂತೆ ಇಂದು ವಿಶ್ವ ಹಿಂದೂ ಪರಿಷತ್ ಇಂದು ತಾಂಬೂಲ ಪ್ರಶ್ನೆಗೆ ನಡೆಸಿದೆ.
ಇಂದು ಮಳಲಿ ಮಸೀದಿಯ ಸಮೀಪದ ರಾಮಾಂಜನೇಯ ಭಜನೆ ಮಂದಿರದಲ್ಲಿ ತಾಂಬೂಲ ಪ್ರಶ್ನೆ ಹಾಕಲಾಗಿದೆ.
ಈ ವೇಳೆ ಮಳಲಿಯ ಮಸೀದಿ ಸ್ಥಳದಲ್ಲಿ ದೈವೀ ಶಕ್ತಿ ಇರುವುದು ನಿಜ ಎಂದು ಕೇರಳದ ಪ್ರಖ್ಯಾತ ಜ್ಯೋತಿಷಿ ಜಿ.ವಿ. ಗೋಪಾಲಕೃಷ್ಣ ಪಣಿಕ್ಕರ್ ಮಾಹಿತಿ ನೀಡಿದ್ದಾರೆ..
Advertisement. Scroll to continue reading.
ಮಸೀದಿ ಇರುವು ಜಾಗದಲ್ಲಿ ದೇವಸ್ಥಾನ ಇದ್ದದ್ದು ನಿಜ. ಸಾಮಾನ್ಯ ತಾಂಬೂಲ ಪ್ರಶ್ನೆ ಪೂರ್ಣವಾಗಿ ಚೈತ್ಯನ್ಯದಿಂದ ಕೂಡಿದೆ. ನಾವು ಪ್ರಾರ್ಥಿಸಿದ ರಾಶಿಯಲ್ಲಿ ದೇವರು ಇರುವುದು ನಿಜ. ಪೂರ್ವದಲ್ಲಿ ಇದೊಂದು ಮಠದ ರೂಪದಲ್ಲಿತ್ತು ಎಂದು ತಿಳಿಯುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಇದು ದೈವ ಸಾನಿಧ್ಯ ಇದ್ದಂತಹ ಸ್ಥಳ, ತಾಂಬೂಲ ಪ್ರಶ್ನೆಯಲ್ಲಿ ಹಿಂದೂ ಧಾರ್ಮಿಕ ಸ್ಥಳ ಎಂದು ಉತ್ತರ ಬಂದಿದೆ. ಇಲ್ಲಿ ಗುರುಪೀಠ ಇತ್ತು. ಯಾವುದೋ ಒಂದು ಕಾಲದಲ್ಲಿ ದೇವಸ್ಥಾನ ಇತ್ತೆಂದು ತಿಳಿಯುತ್ತಿದೆ. ಈಗ ಮೇಲೆದ್ದು ಬಂದಿದೆ. ವಿವಾದದಿಂದ ದೇವಸ್ಥಾನ ನಾಶವಾಗಿದೆಯೆಂದು ತಿಳಿದುಬಂದಿದೆ. ಎತ್ತರದ ಜಾಗದಲ್ಲಿ ಮಹಾತಪಸ್ವಿ ತಪಸ್ಸು ಮಾಡಿದ್ದಾನೆ.ಪೂರ್ಣ ಮಾಹಿತಿ ತಿಳಿಯಲು ತಾಂಬೂಲ ಪ್ರಶ್ನೆ ಸಾಕಾಗದು. ಅಷ್ಟಮಂಗಲ ಪ್ರಶ್ನೆ ಮೂಲಕ ನಿಖರ ಮಾಹಿತಿ ಸಿಗಲಿದೆ ಎಂದು ಹೇಳಿದ್ದಾರೆ.
ಆದಷ್ಟು ಬೇಗ ಸಾನಿಧ್ಯದ ಕೆಲಸಗಳು ನಡೆಯಬೇಕು. ಇಲ್ಲವಾದಲ್ಲಿ ಊರಿಗೆ ಕೆಡುಕುಂಟಾಗುತ್ತದೆ. ಶಾಂತಿ ನೆಲೆಸಲು ದೇವರ ಕಾರ್ಯ ನಡೆಯಬೇಕು ಎಂದು ಹೇಳಿದ್ದಾರೆ.
Advertisement. Scroll to continue reading.