ಕುಂದಾಪುರ : ಚಿನ್ಮಯಿ ಆಸ್ಪತ್ರೆ ಮಾಲಕ ಕಟ್ಟೆ ಗೋಪಾಲಕೃಷ್ಣ (80) ಗುರುವಾರ ಬೆಳಿಗ್ಗೆ ತಮ್ಮ ಸ್ವಂತ ರಿವಾಲ್ವರ್ ನಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ.
ಕೋಟೇಶ್ವರ ಸಮೀಪದ ಪುರಾಣಿಕ ರಸ್ತೆಯ ಕುದುರೆಬೆಟ್ಟುವಿನಲ್ಲಿರುವ ಮೊಳಹಳ್ಳಿ ಗಣೇಶ್ ಶೆಟ್ಟಿ ಎಂಬುವರ ಮನೆಯ ಸಿಟೌಟ್ ನಲ್ಲಿ ಅವರು ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ.
ಖ್ಯಾತ ಉದ್ಯಮಿಯಾಗಿರುವ ಅವರು ಗಂಗೊಳ್ಳಿ, ತಲ್ಲೂರು, ಬೈಂದೂರು ಸೇರಿದಂತೆ ಬೆಂಗಳೂರಿನಲ್ಲೂ ಹೋಟೆಲ್, ಬಟ್ಟೆ ಅಂಗಡಿಗಳನ್ನು ನಡೆಸಿ ಖ್ಯಾತರಾಗಿದ್ದರು.
Advertisement. Scroll to continue reading.
ಕುಂದಾಪುರದಲ್ಲಿ ಚಿನ್ಮಯಿ ಆಸ್ಪತ್ರೆ ಮಾಲೀಕರಾಗಿದ್ದ ಅವರು ಅದರಿಂದಲೂ ಉತ್ತಮ ಹೆಸರು ಪಡೆದಿದ್ದರು. ಅಲ್ಲದೇ, ಕಟ್ಟೆ ಭೋಜಣ್ಣ ಎಂದು ಖ್ಯಾತರಾಗಿದ್ದರು..
ಭೋಜಣ್ಣ ಪತ್ನಿ ಭಾಗೀರಥಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಕುಂದಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸ್ಥಳಕ್ಕಾಗಮಿಸಿ ಪರಿಶೀಲಿಸಿದ್ದಾರೆ. ತನಿಖೆ ಮುಂದುವರೆದಿದೆ.
Advertisement. Scroll to continue reading.