ನವದೆಹಲಿ: ಲೇಖಕಿ ಗೀತಾಂಜಲಿ ಶ್ರೀ ಅವರ ‘ಟಾಂಬ್ ಆಫ್ ಸ್ಯಾಂಡ್’ ಕಾದಂಬರಿಗೆ 2022 ನೇ ಸಾಲಿನ ಪ್ರತಿಷ್ಠಿತ ಅಂತಾರಾಷ್ಟ್ರೀಯ ‘ಬೂಕರ್ ಪ್ರಶಸ್ತಿ’ ಲಭಿಸಿದೆ.
ಈ ಕೃತಿಯನ್ನು ಅಮೆರಿಕದ ಡೇಸಿ ರಾಕ್ವೆಲ್ ಇಂಗ್ಲಿಷ್ ಭಸಷೆಗೆ ಅನುವಾದಿಸಿದ್ದರು.
50 ಸಾವಿರ ಪೌಂಡ್ ಮೌಲ್ಯದ ಸಾಹಿತ್ಯ ಪ್ರಶಸ್ತಿಗೆ ಜಗತ್ತಿನ ನಾನಾ ಭಾಗಗಳಿಂದ ಅನೇಕ ಮಹತ್ವದ ಪುಸ್ತಕಗಳು ಸ್ಪರ್ಧೆಯಲ್ಲಿದ್ದವು. ಆದರೆ ಅಂತಿಮವಾಗಿ, ಗೀತಾಂಜಲಿ ಶ್ರೀ ಅವರ ಈ ಕೃತಿಗೆ ಪ್ರಶಸ್ತಿ ಲಭಿಸಿದೆ.
Advertisement. Scroll to continue reading.
ಇದು ಬೂಕರ್ ಪ್ರಶಸ್ತಿ ಪಡೆದ ಮೊದಲ ಹಿಂದಿ ಭಾಷೆಯ ಕಾದಂಬರಿಯಾಗಿದೆ.