ಕರಾವಳಿ

ಮುನಿಯಾಲು : ದೇಶಿಯ ಗೋತಳಿಗಳ ಅಭಿವೃದ್ಧಿ ಕೇಂದ್ರ ಗೋಧಾಮಕ್ಕೆ ಉಡುಪಿ ಜಿಲ್ಲಾಧಿಕಾರಿ ಭೇಟಿ; ಯುವಜನತೆಗೆ ರಾಮಕೃಷ್ಣ ಆಚಾರ್‌ ಪ್ರೇರಣೆ : ಡಿಸಿ ಕೂರ್ಮರಾವ್‌

0

ವರದಿ : ಶ್ರೀದತ್ತ ಹೆಬ್ರಿ

ಮುನಿಯಾಲು : ಸಾಮಾಜಿಕ ಕಳಕಳಿಯಿಂದ ಅತ್ಯಾಧುನಿಕ ಮಾದರಿಯಲ್ಲಿ ಕೃಷಿಕ್ಷೇತ್ರಕ್ಕೆ ಅಪಾರವಾದ ಕೊಡುಗೆಯನ್ನು ಮುನಿಯಾಲು ಸಂಜೀವಿನಿ ಫಾರ್ಮ್‌ ದೇಶಿಯ ಗೋತಳಿಗಳ ಅಭಿವೃದ್ಧಿ ಕೇಂದ್ರ ಗೋಧಾಮ ನೀಡುತ್ತಿದೆ. ಉಡುಪಿ ಜಿಲ್ಲೆಗೆ ಮಾದರಿಯಾಗಿರುವ ಮುನಿಯಾಲು ಗೋಧಾಮ ದೇಶಕ್ಕೆ ಮಾದರಿಯಾಗಲಿದೆ. ಗೋಧಾಮಕ್ಕೆ ನೀಡಿರುವ ಭೇಟಿ ಅತ್ಯಂತ ಖುಷಿಯಾಗಿದೆ. ಯುವಜನತೆಗೆ ಪ್ರೇರಣೆಯ ಜೊತೆಗೆ ಮಾದರಿಯಾಗಿರುವ ಗೋಧಾಮದ ಸಂಸ್ಥಾಪಕ ಜಿ.ರಾಮಕೃಷ್ಣ ಆಚಾರ್‌ ದೇಶಕ್ಕೆ ವಿಶೇಷ ಕೊಡುಗೆ ನೀಡುತ್ತಿದ್ದಾರೆ ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್‌ ಮೆಚ್ಚುಗೆ ವ್ಯಕ್ತಪಡಿಸಿದರು.


ಅವರು ಸಂಜೀವಿನಿ ಫಾರ್ಮ್‌ ದೇಶಿಯ ಗೋತಳಿಗಳ ಅಭಿವೃದ್ಧಿ ಕೇಂದ್ರ ಗೋಧಾಮಕ್ಕೆ ಶುಕ್ರವಾರ ಭೇಟಿ ನೀಡಿ ಮಾತನಾಡಿದರು.

Advertisement. Scroll to continue reading.

ಮುನಿಯಾಲು ಸಂಜೀವಿನಿ ಫಾರ್ಮ್‌ ದೇಶಿಯ ಗೋತಳಿಗಳ ಅಭಿವೃದ್ಧಿ ಕೇಂದ್ರ ಗೋಧಾಮದ ಸಂಸ್ಥಾಪಕ ಜಿ.ರಾಮಕೃಷ್ಣ ಆಚಾರ್‌ ಮಾತನಾಡಿ, ದೇಶದಲ್ಲಿ ಅನೇಕ ಸಮಸ್ಯೆಗಳ ನಡುವೆ ಬದುಕುವ ನಮಗೆ ಇನ್ನು ಹಳ್ಳಿಯ ಜೀವನಕ್ಕೆ ಅನಿವಾರ್ಯವಾಗಲಿದೆ. ದೇಶ ವಿದೇಶಗಳ ನಗರ ಜೀವನ ಬಯಸುವ ಯುವಜನತೆಯನ್ನು ಸಾವಯವ ಕೃಷಿ ಮತ್ತು ದೇಶಿಯ ಗೋತಳಿಗಳ ಹೈನುಗಾರಿಕೆಯತ್ತ ಆಕರ್ಷಿಸಿ ಬದುಕು ಕಟ್ಟಿಕೊಳ್ಳಲು ಪ್ರೇರೆಪಿಸುವ ಉದ್ದೇಶದಿಂದ ಗೋಧಾಮವನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.


ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್‌, ಮಂಗಳೂರು ರಾಮಕೃಷ್ಣ ಕಾಲೇಜಿನ ಪ್ರಾಂಶುಪಾಲ ಬಾಲಕೃಷ್ಣ ಶೆಟ್ಟಿ, ವಿಶ್ವಕರ್ಮ ಸಮಾಜದ ಮುಖಂಡರಾದ ಮುಂಬಯಿಯ ಜಿ.ಟಿ.ಆಚಾರ್ಯ, ಶ್ರೀಧರ ಆಚಾರ್‌ ಮುಂಬೈ ಮತ್ತು ಮುನಿಯಾಲು ಸಂಜೀವಿನಿ ಫಾರ್ಮ್‌ ದೇಶಿಯ ಗೋತಳಿಗಳ ಅಭಿವೃದ್ಧಿ ಕೇಂದ್ರ ಗೋಧಾಮದ ಮುಖ್ಯಸ್ಥೆ ಸವಿತಾ ರಾಮಕೃಷ್ಣ ಆಚಾರ್‌ ಅವರನ್ನು ಸನ್ಮಾನಿಸಲಾಯಿತು.

ಉಡುಪಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರಸನ್ನ ಎಚ್‌, ಹೆಬ್ರಿ ತಹಶೀಲ್ಧಾರ್‌ ಪುರಂದರ್‌ ಕೆ, ಹೆಬ್ರಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಶಶಿಧರ್‌ ಕೆಜಿ, ಮೆಸ್ಕಾಂ ನಿರ್ದೇಶಕ ಮುನಿಯಾಲು ದಿನೇಶ ಪೈ, ವರಂಗ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾ ಹೆಬ್ಬಾರ್‌, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಜ್ಯೋತಿ ಹರೀಶ ಪೂಜಾರಿ, ಭೂಮಾಪನ ಇಲಾಖೆಯ ಅಧಿಕಾರಿ ರವೀಂದ್ರನಾಥ್‌, ಸಂಜೀವಿನಿ ಫಾರ್ಮ್‌ ಅಭಿಮಾನಿಗಳು, ಸ್ಥಳೀಯ ಗಣ್ಯರು ಉಪಸ್ಥಿತರಿದ್ದರು.


ಇದೇ ಸಂದರ್ಭದಲ್ಲಿ ಮಂಗಳೂರು ರಾಮಕೃಷ್ಣ ಕಾಲೇಜಿನ ವಿದ್ಯಾರ್ಥಿಗಳಿಂದ ಎನ್‌ಎಸ್‌ಎಸ್‌ ಶಿಬಿರ ನಡೆಯಿತು. ಲಯನ್ಸ್‌ ಜಿಲ್ಲಾ ವಕ್ತಾರ ಹೆಬ್ರಿಯ ಟಿ.ಜಿ.ಆಚಾರ್ಯ ಸ್ವಾಗತಿಸಿ ಉಪನ್ಯಾಸಕ ನಟೇಶ್‌ ನಿರೂಪಿಸಿ, ಬೆಳುವಾಯಿ ಭಾಸ್ಕರ ಆಚಾರ್ಯ ವಂದಿಸಿದರು.

Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com