ದಕ್ಷಿಣ ಕನ್ನಡ : ಶಾಲಾ-ಕಾಲೇಜು ಆವರಣದಲ್ಲಿ ವಸ್ತ್ರ ಸಂಹಿತೆ ಜಾರಿಗೊಳಿಸಿ ಕೋರ್ಟ್ ಆದೇಶಿಸಿತ್ತು. ನಿಯಮ ಪಾಲಿಸದೆ ಕಾಲೇಜಿಗೆ ಹಾಜಾರಾದ ವಿದ್ಯಾರ್ಥಿನಿಯರನ್ನು ಅಮಾನತು ಮಾಡಿರುವ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.
ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆಯ ಕಾಲೇಜಿಗೆ, ಕೋರ್ಟ್ ಆದೇಶವಿದೆ. ಹಿಜಾಬ್ ತೆಗೆದಿರಿಸಿ ಕಾಲೇಜು ತರಗತಿಗೆ ಹಾಜರಾಗುವಂತೆ ಪ್ರಾಂಶುಪಾಲರು, ಉಪನ್ಯಾಸಕರು ಸೂಚಿಸಿದ್ದರು. ಆದರೆ, 6 ವಿದ್ಯಾರ್ಥಿನಿಯರು ಕೋರ್ಟ್ ಆದೇಶ, ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರ ಸೂಚನೆಗೆ ಪಾಲಿಸದೆ ಹಿಜಾಬ್ ಧರಿಸಿಯೇ ಕಾಲೇಜಿಗೆ ಆಗಮಿಸುತ್ತಿದ್ದರು.
ಹೀಗಾಗಿ, ಪ್ರಾಂಶುಪಾಲರು, ಉಪನ್ಯಾಸಕರು ಸಭೆ ನಡೆಸಿ, ಕೋರ್ಟ್ ಆದೇಶ, ಶಿಕ್ಷಣ ಇಲಾಖೆಯ ಆದೇಶವನ್ನು ಧಿಕ್ಕರಿಸಿ, ತರಗತಿಗೆ ಹಿಜಾಬ್ ಧರಿಸಿಯೇ ಬರುತ್ತಿರುವಂತ ವಿದ್ಯಾರ್ಥಿನಿಯರನ್ನು ಕಾಲೇಜಿನಿಂದ ಅಮಾನತುಗೊಳಿಸೋ ತೀರ್ಮಾನವನ್ನು ಕೈಗೊಂಡಿದ್ದು,
Advertisement. Scroll to continue reading.
ಕೋರ್ಟ್ ಆದೇಶವನ್ನು ಧಿಕ್ಕರಿಸಿ, ಹಿಜಾಬ್ ಧರಿಸಿ ಕಾಲೇಜಿಗೆ ಆಗಮಿಸುತ್ತಿದ್ದಂತ 6 ವಿದ್ಯಾರ್ಥಿನಿಯರನ್ನು ಕಾಲೇಜಿನಿಂದ ಅಮಾನತುಗೊಳಿಸಲಾಗಿದೆ.