ರೇವಾ : ದೋಣಿ ಮಗುಚಿ ಬಿದ್ದ ಪರಿಣಾಮ ಮೂವರು ಸಾವನ್ನಪ್ಪಿದ್ದು, ಇನ್ನಿಬ್ಬರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಮಧ್ಯಪ್ರದೇಶದ ರೇವಾ ಜಿಲ್ಲೆಯ ತಮಸ್ ನದಿಯಲ್ಲಿ ನಡೆದಿದೆ.
ಹರ್ದಹಾನ್ ಗ್ರಾಮದ ನಿವಾಸಿಗಳಾದ ಸತ್ಯಂ ಕೇವತ್(19), ಪವನ್ ಕುಮಾರ್ ಕೇವತ್ (20) ಮತ್ತು ರಾಮಶಂಕರ್ ಕೇವತ್ (18) ಮೃತಪಟ್ಟವರು.
ಇವರುಗಳು ತಮ್ಮ ಗ್ರಾಮದ ಮತ್ತೊಂದು ಬದಿಯಲ್ಲಿರುವ ಗುರುಗುಡಾ ಗ್ರಾಮದಲ್ಲಿನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ದೋಣಿ ಮೂಲಕ ತೆರಳುತ್ತಿದ್ದರು ಎನ್ನಲಾಗಿದೆ.
Advertisement. Scroll to continue reading.
ಈ ವೇಳೆ ದೋಣಿ ನದಿ ಮಧ್ಯದಲ್ಲಿ ಮಗುಚಿದೆ. ಪರಿಣಾಮ ನೀರಿನಲ್ಲಿ ಮುಳುಗಿದ್ದಾರೆ. ಇನ್ನೂ, ಇವರೊಂದಿಗೆ ದೋಣಿಯಲ್ಲಿದ್ದ ನಾವಿಕ, ಮತ್ತೊಬ್ಬ ಪ್ರಯಾಣಿಕ ಈಜಿ ದಡ ಸೇರಿದ್ದಾರೆ. ಆದ್ರೆ, ಇಲ್ಲಿಯವರೆಗೂ ಇವರು ಪತ್ತೆಯಾಗಿಲ್ಲ ಎನ್ನಲಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿದ್ದು, ಯುವಕರ ರಕ್ಷಣಾ ಕಾರ್ಯ ಮುಂದುವರೆಸಿದ್ದಾರೆ.
Advertisement. Scroll to continue reading.