ಟೆಕ್ಸಾಸ್ : ತನ್ನ ಗೆಳತಿಯೊಂದಿಗೆ ಜಗಳವಾಡಿದ ವ್ಯಕ್ತಿಯೊಬ್ಬ, ಡಲ್ಲಾಸ್ ಮ್ಯೂಸಿಯಂ ಆಫ್ ಆರ್ಟ್ ನಲ್ಲಿದ್ದ 40 ಕೋಟಿ ಮೌಲ್ಯದ ಬೆಲೆ ಬಾಳುವ ವಸ್ತುಗಳನ್ನು ಪುಡಿಮಾಡಿರುವ ಘಟನೆ ಅಮೆರಿಕದಲ್ಲಿ ನಡೆದಿದೆ.
21 ವರ್ಷದ ಬ್ರಿಯಾನ್ ಹೆರ್ನಾಂಡೆಜ್ ಕೃತ್ಯ ಎಸಗಿದಾತ.
ಅಮೆರಿಕದ ಟೆಕ್ಸಾಸ್‌ನಲ್ಲಿರುವ ಡಲ್ಲಾಸ್ ಮ್ಯೂಸಿಯಂ ಆಫ್ ಆರ್ಟ್‌ಗೆ ನುಗ್ಗಿ ತನ್ನ ಗೆಳತಿಯೊಂದಿಗೆ ಜಗಳವಾಡಿದ ಆತ ಬಳಿಕ ಸುಮಾರು 40.37 ಕೋಟಿ ಮೌಲ್ಯದ ವಸ್ತುಗಳಿಗೆ ಹಾನಿ ಮಾಡಿದ್ದಾನೆ ಎನ್ನಲಾಗಿದೆ.
Advertisement. Scroll to continue reading.
ಸದ್ಯ ಡಲ್ಲಾಸ್ ಪೊಲೀಸರು ಬ್ರಿಯಾನ್ ನನ್ನು ಬಂಧಿಸಿದ್ದಾರೆ.
ಘಟನೆಯ ಬಗ್ಗೆ ಸಿಸಿಟಿವಿ ಪರೀಲನೆ ನಡೆಸಲಾಗಿತ್ತು. ಆತನ ಚಲನ ವಲನ ಸೆರೆಯಾಗಿದೆ. ರಾತ್ರಿ ವೇಳೆ ಮ್ಯೂಸಿಯಂನ ಪ್ರವೇಶದ್ವಾರದ ಹೊರಗಿನಿಂದ ಹೆರ್ನಾಂಡೆಜ್ ಬರುವುದು ಸಿಸಿ ಕ್ಯಾಮರಾದಲ್ಲಿ ಕಂಡಿದೆ.
ಬಳಿಕ ವಸ್ತು ಸಂಗ್ರಹಾಲಯದ ಒಳಗೆ ನುಗ್ಗಿ ಆರನೇ ಶತಮಾನದ ಗ್ರೀಕ್ ಪ್ರತಿಮೆ ಮತ್ತು 450 BC ಯ ಹಿಂದಿನ ಮಡಕೆ ಸೇರಿದಂತೆ ಅಮೂಲ್ಯ ವಸ್ತುಗಳಿಗೆ ಹಾನಿ ಉಂಟುಮಾಡಿದ್ದಾನೆ. ಅದಲ್ಲದೆ, ಸುಮಾರು ರೂ. 77 ಲಕ್ಷ ಮೌಲ್ಯದ ಕೈಲಿಕ್ಸ್ ಹೆರಾಕಲ್ಸ್ ಮತ್ತು ನೆಮಿಯಾನ್ ಸಿಂಹ ಪ್ರತಿಮೆಯನ್ನೂ ಪುಡಿ ಮಾಡಿದ್ದಾನೆ ಎಂದು ವರದಿಯಾಗಿದೆ.
ಕಲಾಕೃತಿಗಳ ಹೊರತಾಗಿ, ಲ್ಯಾಪ್‌ಟಾಪ್, ಮಾನಿಟರ್, ಫೋನ್, ನಾಲ್ಕು ಪ್ಲೆಕ್ಸಿಗ್ಲಾಸ್ ಡಿಸ್‌ಪ್ಲೇ ಕೇಸ್‌ಗಳು ಮತ್ತು ಎರಡು ಮರದ ಡಿಸ್‌ಪ್ಲೇ ಚಿಹ್ನೆಗಳು ಸೇರಿದಂತೆ ಇತರ ವಸ್ತುಗಳನ್ನು ನಾಶಪಡಿಸಿದ್ದಾನೆ ಎನ್ನಲಾಗಿದೆ.
Advertisement. Scroll to continue reading.