ವರದಿ : ದಿನೇಶ್ ರಾಯಪ್ಪನಮಠ
ಶಿವಮೊಗ್ಗ : ಸರ್ಕಾರವು ಸದಾ ರೈತರಿಗೆ ವಿವಿಧ ಆಯಾಮದಲ್ಲಿ ರೈತರ ಪರವಾಗಿ ಸಾದಾ ಜೋಳ, ಮೆಕ್ಕೆ ಜೋಳ, ರಾಗಿ, ಹೆಸರು, ತೊಗರಿ, ಶೇಂಗಾ, ಹತ್ತಿ ಬೆಲೆಯನ್ನು ಹೆಚ್ಚಳ ಮಾಡಲಾಗಿದೆ. 14 ಖಾರಿಫ್ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ನೀಡಿ ಈ ಕೋವಿಡ್ ಸಂಕಷ್ಟದ ಸಮಯದಲ್ಲೂ ಕೂಡ ರೈತರೊಂದಿಗೆ ನಾವಿದ್ದೇವೆ ಎಂಬ ಸಂದೇಶವನ್ನು ಈ ಮೂಲಕ ಸಾರಿದ್ದಾರೆ. 2022-23ನೇ ಬೆಳೆ ವರ್ಷಕ್ಕೆ ಸಂಬಂಧಿಸಿದಂತೆ ನಿರ್ಧಾರ ಇದಾಗಿದ್ದು ಸರಕಾರದ ಈ ಕ್ರಮದಿಂದಾಗಿ ವೈವಿಧ್ಯಮಯ ಬೆಳೆಗಳನ್ನು ಬೆಳೆಯಲು ರೈತರಿಗೆ ಪ್ರೋತ್ಸಾಹ ಸಿಗಲಿದೆ. 'ಬೀಜದಿಂದ ಮಾರುಕಟ್ಟೆಯ ವರೆಗೆ’ ಎಂಬ ತತ್ವದ ಅನ್ವಯ ಮೋದಿ ಸರಕಾರ ರೈತರಿಗೆ ಎಲ್ಲ ರೀತಿಯ ನೆರವು ನೀಡಲು ಬದ್ಧವಾಗಿದೆ. ಆದರನ್ವಯ ರೈತರ ಆದಾಯ ಹೆಚ್ಚಿಸಲಾಗುವುದು, ಕನಿಷ್ಠ ಬೆಂಬಲ ಏರಿಕೆ ಮಾಡಿದ ಕಾರಣ ಕೊಯ್ಲಿನ ಬಳಿಕ ರೈತರಲ್ಲಿ ತಾವು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗುತ್ತದೆ ಎಂಬ ಧನಾತ್ಮಕ ಚಿಂತನೆ ಮೂಡಲಿದೆ.
ಮೀಡಿಯಂ ಸ್ಟೇವಲ್ ಹತ್ತಿಯ ಬೆಂಬಲ ಬೆಲೆಯನ್ನು 5,726 ರೂ.ಗಳಿಂದ 6,080 ರೂ.ಗಳಿಗೆ ಹೆಚ್ಚಿಸಲಾಗಿದೆ. ತೊಗರಿಗೆ 6,300 ರೂ. ಗಳಿಂದ 6,600 ರೂ.ಗಳಿಗೆ ಹೆಚ್ಚಿಸಲಾಗಿದೆ. ಶೇಂಗಾ ಬೆಲೆಯನ್ನು 5,550 ರೂ.ಗಳಿಂದ 5,850 ರೂ.ಗಳಿಗೆ ಹೆಚ್ಚಿಸಲಾಗಿದೆ. ಸೂರ್ಯಕಾಂತಿ ಬೀಜಕ್ಕೆ ಕಳೆದ ವರ್ಷ 6,015 ರೂ. ಇದ್ದ ಬೆಂಬಲ ಬೆಲೆಯನ್ನು 6,600 ರೂ.ಗೆ ಹೆಚ್ಚಿಸಲು ಸಂಪುಟ ತೀರ್ಮಾನಿಸಿದೆ. ಪ್ರತೀ ಕ್ವಿಂಟಾಲ್ ಸಾಸಿವೆಗೆ 7,307 ರೂ.ಗಳಿಂದ 7,830 ರೂ.ಗಳಿಗೆ ಪರಿಷ್ಕರಿಸಲಾಗಿದೆ.
Advertisement. Scroll to continue reading.
ಮಾರುಕಟ್ಟೆಗೆ ಬಂದಾಗ ಮಾರುಕಟ್ಟೆ ಬೆಲೆಯನ್ನು ಆಧರಿಸಿ ಖರೀದಿ ಕೇಂದ್ರ ತೆರೆಯುವ, ಇಲ್ಲವೇ ಮಾರುಕಟ್ಟೆಯಲ್ಲಿರುವ ಬೆಲೆಯನ್ನು ಆಧರಿಸಿ ಬೆಂಬಲ ಬೆಲೆಯ ಪರಿಷ್ಕರಣೆ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಬಿತ್ತನೆ ಸಮಯದಲ್ಲೇ ಬೆಂಬಲ ಬೆಲೆಯನ್ನು ನಿಗದಿ ಮಾಡಿರುವುದು ರೈತರ ಸಂತಸಕ್ಕೆ ಕಾರಣವಾಗಿದೆ. ಜತೆಗೆ, ಕೃಷಿ ಕಾರ್ಯದಲ್ಲಿ ತೊಡಗುವ ಉತ್ಸಾಹವನ್ನು ಹೆಚ್ಚಿಸಲಿದೆ. ಸಚಿವ ಸಂಪುಟದ ಸಭೆಯ ನಿರ್ಧಾರಗಳು ವಾಣಿಜ್ಯ ಬೆಳೆಗಾರರಿಗೂ ಸಂತಸ ತರಲಿದೆ.
2021-2022 ಮುಂಗಾರು ಹಂಗಾಮು ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಅಗ್ರಿ ಕಲ್ಚರಲ್ ಇನ್ಸೂರೆನ್ಸ್ ಕಂಪನಿ ಮೂಲಕ 10,0907 ಫಲಾನುಭವಿಗಳಿಗೆ 758.68658 ಲಕ್ಷ ರೂ. ವಿಮಾ ಮೊತ್ತ ನೀಡಿದೆ.
ಇಂತಹ ಮಹತ್ವದ ನಿರ್ಧಾರಗಳನ್ನು ಕೈಗೊಂಡ ಕೇಂದ್ರದ ನರೇಂದ್ರ ಮೋದಿ ಜಿ ನೇತ್ರತ್ವದ ಸರ್ಕಾರಕ್ಕೆ ಸಂಸದ ಬಿ. ವೈ. ರಾಘವೇಂದ್ರ ಅವರು ಅಭಿನಂದನೆ ಸಲ್ಲಿಸಿದ್ದಾರೆ.
Advertisement. Scroll to continue reading.