ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ದೇಶದಾದ್ಯಂತ ನಾಗರೀಕತೆಗೆ ಪ್ರಮುಖ ದಾಖಲೆಯಾದ ಆಧಾರ್ ಕಾರ್ಡ್ ನ್ನು ೫ ವರ್ಷದ ಒಳಗಿನ ಮಕ್ಕಳಿಗೆ ನೀಡಲು ಪ್ರತೀ ಗ್ರಾಮೀಣ ಭಾಗದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವ್ಯವಸ್ಥೆ ಮಾಡಿದೆ.
ಪ್ರತೀ ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯರು ಅವರ ವ್ಯಾಪ್ತಿಯ ಮಕ್ಕಳ ಪೋಷಕರಿಗೆ ನಿಗದಿತ ದಿನದಂದು ಆಧಾರ್ ಕಾರ್ಡ್ ಮಾಡಲು ಸ್ಥಳೀಯ ಗ್ರಾಮ ಪಂಚಾಯತಿ ಭಾಗದಲ್ಲಿ ವ್ಯವಸ್ಥೆ ಮಾಡಲಾಗಿದೆ.
Advertisement. Scroll to continue reading.
ಬಾರಕೂರು ಗ್ರಾಮ ಪಂಚಾಯತಿಯಲ್ಲಿ ಗುರುವಾರ ಹೊಸಾಳ, ಕಚ್ಚೂರು, ನಾಗರಮಠ, ಹನೆಹಳ್ಳಿ ಭಾಗದ ಅನೇಕ ಪೋಷಕರು ಮಕ್ಕಳನ್ನು ಕರೆತಂದು ಆಧಾರ್ ಕಾರ್ಡ್ ಮಾಡುವ ಪ್ರಕ್ರಿಯೆ ನಡೆಯಿತು.
ಆಧಾರ್ ಕಾರ್ಡ್ ಹೊಂದಿದ ಮಕ್ಕಳ ತಂದೆ ಅಥವಾ ತಾಯಿ ಯ ಬೆರಳಚ್ಚು ತೆಗೆದು ಮಗುವಿನ ಭಾವ ಚಿತ್ರದೊಂದಿಗೆ ಆಧಾರ್ ಕಾರ್ಡ್ ಮಾಡುತ್ತಿದ್ದು, ೩ ವಾರದಲ್ಲಿ ಕಾರ್ಡ್ ಪೋಷಕರ ಕೈ ಸೇರಲಿದೆ. ಗ್ರಾಮೀಣ ಭಾಗದ ಜನರಿಗೆ ಇದು ಅಕ್ಟೋಬರ್ ತಿಂಗಳ ತನಕ ನಡೆಯಲಿದ್ದು, ಸಾರ್ವಜನಿಕರು ಇದರ ಉಪಯೋಗ ಪಡೆದುಕೊಳ್ಳುವಂತೆ ಬ್ರಹ್ಮಾವರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕುಮಾರ್ ನಾಯ್ಕ್ ತಿಳಿಸಿದ್ದಾರೆ.