ರಾಜ್ಯ

ಕೊರೋನಾ ಹೆಚ್ಚಳ : ರಾಜ್ಯಾದ್ಯಂತ ಮತ್ತೆ ಮಾಸ್ಕ್ ಕಡ್ಡಾಯ

1

ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಿದೆ. ಹೀಗಾಗಿ ಹೊಸ ಮಾರ್ಗಸೂಚಿ ಕ್ರಮಗಳನ್ನು ರಾಜ್ಯ ಆರೋಗ್ಯ ಇಲಾಖೆ ಪ್ರಕಟಿಸಿದೆ.

ಈ ಹೊಸ ಮಾರ್ಗಸೂಚಿಯಂತೆ ರಾಜ್ಯಾದ್ಯಂತ ಮತ್ತೆ ಮಾಸ್ಕ್ ಕಡ್ಡಾಯಗೊಳಿಸಿ ಆದೇಶಿಸಿದೆ. 

ಈ ಸಂಬಂಧ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಡಿ.ರಂದೀಪ್ ಅವರು ಸುತ್ತೋಲೆ ಹೊರಡಿಸಿದ್ದಾರೆ.

Advertisement. Scroll to continue reading.

ರಾಜ್ಯದಲ್ಲಿ ಕಳೆದ 10 ದಿನಗಳಿಂದ ಕೋವಿಡ್ ಪ್ರಕರಣಗಳ ಸಂಖ್ಯೆ ನಿಧಾನಗತಿಯಲ್ಲಿ ಏರಿಕೆಯಾಗುತ್ತಿವೆ. ಹೀಗಾಗಿ ಈ ಕೆಳಗಿನ ಮಾರ್ಗಸೂಚಿ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಆದೇಶಿಸಿದ್ದಾರೆ.

ಕೋವಿಡ್ ನಿಯಂತ್ರಣದ ಹೊಸ ಮಾರ್ಗಸೂಚಿ ಕ್ರಮಗಳು :

  • ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ
  • ಮಾಸ್ಕ್ ಧರಿಸದೇ ಇದ್ದರೇ ಮಾರ್ಷಲ್, ಪೊಲೀಸ್ ಸಿಬ್ಬಂದಿಗಳು ದಂಡ ವಿಧಿಸಲು ಸೂಚನೆ
  • ಮುಚ್ಚಿದ ಕಫೆ ಟೀರಿಯಾ, ಹೋಟೆಲ್, ಶೈಕ್ಷಣಿಕ ಸಂಸ್ಥೆಗಳು, ಮಾಲ್ ಗಳು, ರೆಸ್ಟೋರೆಂಟ್ ಗಳು, ಪಬ್ ಗಳು, ಕಚೇರಿಗಳು, ಕಾರ್ಖಾನೆಗಳಲ್ಲಿ ಜನರು, ಸಿಬ್ಬಂದಿಗಳು ಮಾಸ್ಕ್ ಧರಿಸುವುದು ಕಡ್ಡಾಯ.
  • ಮಾಸ್ಕ್ ಧರಿಸಿದ ಜನರಿಗೆ ಮಾತ್ರವೇ ಮುಚ್ಚಿದ ಸ್ಥಳಗಳಲ್ಲಿನ ಪ್ರದೇಶಗಳಿಗೆ ಅನುಮತಿ
  • ಸ್ವಂತ ವಾಹನಗಳು ಹಾಗು ಸಾರ್ವಜನಿಕ ಸಾರಿಗೆಗಳಲ್ಲಿ ( ಬಸ್ ಮತ್ತು ರೈಲು ) ಪ್ರಯಾಣಿಸುವ ಸಂದರ್ಭದಲ್ಲಿ ಸಾರ್ವಜನಿಕರು ಮಾಸ್ಕ್ ಧರಿಸುವುದು ಕಡ್ಡಾಯ
  • ಐಎಲ್‌ಐ ಮತ್ತು ಸಾರಿ ಲಕ್ಷಣಗಳನ್ನು ಹೊಂದಿರುವವರು, ಹೈರಿಸ್ಕ್ ಗುಂಪಿನವರು ಹಾಗೂ ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರೋರು ಆದ್ಯತೆ ಮೇರೆಗೆ ಪರೀಕ್ಷೆ ಒಳಪಡಲು ಸೂಚನೆ
  • ಅರ್ಹ ಜನರೆಲ್ಲರೂ ಪ್ರಿಕಾಷನರಿ ಡೋಸ್ ಸೇರಿದಂತೆ, ಕೋವಿಡ್ ಲಸಿಕೆ ಪಡೆಯಲು ಸೂಚನೆ

ಈ ಮೇಲ್ಕಂಡ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆ ರಾಜ್ಯ ಆರೋಗ್ಯ ಇಲಾಖೆ ಹೇಳಿದೆ. ಇಲ್ಲವಾದಲ್ಲಿ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದೆ.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com