ನವದೆಹಲಿ : ಬಾಕ್ಸರ್ ಮತ್ತು ಆರು ಬಾರಿಯ ವಿಶ್ವ ಚಾಂಪಿಯನ್ ಎಂಸಿ ಮೇರಿ ಕೋಮ್ ಅವರ ಈ ವರ್ಷದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸುವ ಕನಸು ಶುಕ್ರವಾರ ಭಗ್ನಗೊಂಡಿದೆ. ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಗೇಮ್ಸ್ ಟ್ರಯಲ್ಸ್ ವೇಳೆ ಗಾಯದಿಂದಾಗಿ ಸಿಡಬ್ಲ್ಯುಜಿ 2022ರಿಂದ ಹೊರಗುಳಿಯಬೇಕಾಯಿತು.
ಗಾಯವಾದ ನಂತ್ರವೂ 39 ವರ್ಷದ ಮೇರಿ ಕೋಮ್ ಸ್ಪರ್ಧಿಸಲು ಎದ್ದು ನಿಲ್ಲಲು ಪ್ರಯತ್ನಿಸಿದರು. ಆದ್ರೆ, ಒಂದೆರಡು ಪಂಚ್‌ಗಳ ನಂತ್ರ ಅವ್ರ ಮತ್ತೆ ಸಮತೋಲನ ಕಳೆದುಕೊಂಡರು ಮತ್ತು ಎಡಗಾಲನ್ನು ಹಿಡಿದುಕೊಂಡು ಕುಳಿತರು. ನಂತರ ಮ್ಯಾಚ್ ರೆಫರಿ ನೀತು ಅವರನ್ನು ವಿಜೇತೆ ಎಂದು ಘೋಷಿಸಿದರು.
ಈ ವರ್ಷದ ಜುಲೈ-ಆಗಸ್ಟ್‌ನಲ್ಲಿ ಬರ್ಮಿಂಗ್ಹ್ಯಾಮ್‌ನಲ್ಲಿ ಕಾಮನ್ವೆಲ್ತ್ ಕ್ರೀಡಾಕೂಟ ನಡೆಯಲಿದೆ.
Advertisement. Scroll to continue reading.
ಎಂಸಿ ಮೇರಿ ಕೋಮ್ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಒಂದು ಚಿನ್ನದ ಪದಕ, ವಿಶ್ವ ಚಾಂಪಿಯನ್ಶಿಪ್‌ನಲ್ಲಿ ಆರು ಚಿನ್ನ, ಒಂದು ಬೆಳ್ಳಿ ಮತ್ತು ಒಂದು ಕಂಚಿನ ಪದಕ ಸೇರಿದಂತೆ 8 ಪದಕಗಳನ್ನ ಗೆದ್ದಿದ್ದಾರೆ. ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನ ಮತ್ತು ಕಂಚಿನ ಪದಕ ಪಡೆದಿದ್ದಾರೆ.