ಧಾರವಾಡ : ತನ್ನ ಪ್ರಿಯತಮನ ಜೊತೆ ಸೇರಿ ಮಗಳು ತಾಯಿಗೆ ಚೂರಿ ಇರಿದಿರುವ ಘಟನೆ ಧಾರವಾಡದಲ್ಲಿ ನಡೆದಿದೆ.
ತನ್ನ ಲವರ್ ಜೊತೆಗೆ ಸೇರಿಕೊಂಡು ಸ್ವಂತ ತಾಯಿಗೆ ಮಗಳು ಚಾಕು ಇರಿದಿದ್ದು, ತಾಯಿ ಜೀಜಾಬಾಯಿ ಸ್ಥಿತಿ ಗಂಭೀರವಾಗಿದೆ. ಆಕೆಗೆ ಸದ್ಯ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯ ಬಳಿಕ ಮಗಳು ಪ್ರಿಯಕರನ ಜೊತೆಗೆ ಪರಾರಿಯಾಗಿದ್ದಾಳೆ. ಯಾವ ಕಾರಣಕ್ಕಾಗಿ ತಾಯಿಗೆ ಚಾಕು ಇರಿದಿದ್ದಾಳೆ ಎಂಬುದು ತಿಳಿದು ಬಂದಿಲ್ಲ.
Advertisement. Scroll to continue reading.